ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ್ದ ತಮಿಳುನಾಡು ಆಟೋ ಚಾಲಕನಿಗೆ ಥಳಿತ: ವೀಡಿಯೋ
ತಮಿಳು ನಾಡು ಆಟೋ ಚಾಲಕನೊಬ್ಬ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ತಮಿಳ್ ಸಾಯಿ ಸೌಂದರರಾಜನ್ ಅವರನ್ನು ದಿನ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ....

Published On :
ಚೆನ್ನೈ: ತಮಿಳು ನಾಡು ಆಟೋ ಚಾಲಕನೊಬ್ಬ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ತಮಿಳ್ ಸಾಯಿ ಸೌಂದರರಾಜನ್ ಅವರನ್ನು ದಿನ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ ಕುರಿತು ಪ್ರಶ್ನಿಸಿದ್ದಕ್ಕಾಗಿ ಅವನನ್ನು ದೂರಕ್ಕೆ ಹೋಗುವಂತೆ ತಳ್ಳಿರುವುದಲ್ಲದೆ ಕೆಲವು ಆಪ್ತ ಸಹಾಯಕರು ಅವನ ಮೇಲೆ ಹಲ್ಲೆ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಮುಖ್ಯಸ್ಥೆ ಮಾದ್ಯಮಗಳೊಡನೆ ಸಂವಾದ ನಡೆಸುತ್ತಿದ್ದಾಗ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಆಟೋರಿಕ್ಷಾ ಚಾಲಕ ಪ್ರಶ್ನೆಗಳನ್ನು ಕೇಳಿದ್ದಾನೆ. ತಕ್ಷಣ ಅವರ ಸಹಾಯಕ ಹಾಘೂ ಬಿಜೆಪಿ ಮುಖಂಡ ವಿ. ಕಾಳಿದಾಸ್ ಆ ಮನುಷ್ಯನನ್ನು ತಳ್ಳಿದ್ದು ಅವನ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಅಮಾನವೀಯ ಘಟನೆ ವೀಡಿಯೋವನ್ನು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 85.31 ರೂ. ಮತ್ತು ಡೀಸೆಲ್ ಪ್ರತೀ ಲೀ.ಗೆ78.00 ರೂ. ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Petrol priceಪೆಟ್ರೋಲ್ ಬೆಲೆTamil Nadu auto driverBJP\'s Tamil Nadu state chiefತಮಿಳುನಾಡು ಆಟೋ ಚಾಲಕತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


