ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ; 61 ಜನರ ಬಲಿ ಪಡೆದ ಬಸ್ ಚಾಲಕ ಪಡೆದಿದ್ರೂ ಅತ್ಯುತ್ತಮ ಚಾಲಕ ಪ್ರಶಸ್ತಿ!
ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಹೌದು, ತೆಲಂಗಾಣದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 61 ಜನರು...

Published On :
ಹೈದರಾಬಾದ್: ವಿಧಿಯಾಟದ ಮುಂದೆ ಯಾರೂ ಸಮರ್ಥರಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಹೌದು, ತೆಲಂಗಾಣದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 61 ಜನರು ಸಾವಿಗೀಡಾಗಿದ್ದು ಬಸ್ ನ ಚಾಲಕ ಅತ್ಯುತ್ತಮ ಚಾಲಕ ಪ್ರಶಸ್ತಿ ಸ್ವೀಕರಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಬಸ್ ಚಾಲಕರಾಗಿದ್ದ ಶ್ರೀನಿವಾಸ್ ಅವರು ಬಸ್ ದುರಂತದಲ್ಲಿ ಮೃತಪಟ್ಟಿದ್ದು ಕಳೆದ ತಿಂಗಳಷ್ಟೇ ಅತ್ಯುತ್ತಮ ಚಾಲಕ ಪ್ರಶಸ್ತಿ ಪಡೆದುದಲ್ಲದೆ, ಈ ಹಿಂದೆ ಇಂಧನ ದಕ್ಷತೆಗಾಗಿ ಪುರಸ್ಕೃತರಾಗಿದ್ದರು.
ಇನ್ನೊಂದೆಡೆ ಬಸ್ ದುರಂತಕ್ಕೆ ಇಂಧನ ಉಳಿಸಲು ಬಸ್ ಚಾಲಕ ಶಾರ್ಟ್ ಕಟ್ ತೆಗೆದುಕೊಂಡಿರುವುದೇ ಕಾರಣವಿರಬಹುದೇ ಎಂಬ ವರದಿಗಳು ಕೇಳಿಬಂದಿದ್ದು ಇದನ್ನು ಟಿಎಸ್ಆರ್ಟಿಸಿ ಸಿಬ್ಬಂದಿ ನಿರಾಕರಿಸಿದ್ದಾರೆ.
ಏನೇ ಆಗಲಿ ಅತ್ಯುತ್ತಮ ಚಾಲಕ ಪ್ರಶಸ್ತಿ ಪಡೆದ ಚಾಲಕನಿಂದಲೇ ಭೀಕರ ಅಪಘಾತ ಸಂಭವಿಸಿ 61 ಜನರ ಪ್ರಾಣ ಹೋಗಿರುವುದು ಮಾತ್ರ ದುರಾದುಷ್ಟಕರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


