ದೇಶ

ಮೋಮೊ ಚಾಲೆಂಜ್: ಮಕ್ಕಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಲು ಪೋಷಕರಿಗೆ ಡಬ್ಲ್ಯುಸಿಡಿ ಸಲಹೆ

ಮಾರಣಾಂತಿಕ ಮೋಮೊ ಚಾಲೆಂಜ್ ಗೆ ಈಗಾಗಲೇ ಹಲವು ಜೀವಗಳು ಬಲಿಯಾಗಿದ್ದು, ಮಕ್ಕಳ ಆನ್ ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೋಷಕರಿಗೆ ಸಲಹೆ

ಮೋಮೊ ಚಾಲೆಂಜ್: ಮಕ್ಕಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಲು ಪೋಷಕರಿಗೆ ಡಬ್ಲ್ಯುಸಿಡಿ ಸಲಹೆ
ಮೋಮೊ ಚಾಲೆಂಜ್: ಮಕ್ಕಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಲು ಪೋಷಕರಿಗೆ ಡಬ್ಲ್ಯುಸಿಡಿ ಸಲಹೆ
Published On :
ನವದೆಹಲಿ: ಮಾರಣಾಂತಿಕ ಮೋಮೊ ಚಾಲೆಂಜ್ ಗೆ ಈಗಾಗಲೇ ಹಲವು ಜೀವಗಳು ಬಲಿಯಾಗಿದ್ದು, ಮಕ್ಕಳ ಆನ್ ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೋಷಕರಿಗೆ ಸಲಹೆ ನೀಡಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ಮೋಮೊ ಚಾಲೆಂಜ್ ವೈರಲ್ ಆಗುತ್ತಿದ್ದಂತೆಯೇ ಎಚ್ಚರಿಕೆ ವಹಿಸಿರುವ ಮಹಿಳಾ ಮತ್ತು ಮಕ್ಕಳ ಇಲಾಖೆ "ತಮ್ಮ ಮಕ್ಕಳು ಮೋಮೊ ಚಾಲೆಂಜ್ ನ್ನು ಸ್ವೀಕರಿಸದಂತೆ ಎಚ್ಚರ ವಹಿಸಿ" ಎಂದು ಪೋಷಕರಿಗೆ ಹೇಳಿದೆ. 
ಮಕ್ಕಳಿಗೆ ಮೋಮೊ ಚಾಲೆಂಜ್ ಬಗ್ಗೆ ಈಗಾಗಲೇ ಏನು ತಿಳಿದಿಲ್ಲವಾದರೆ ಪೋಷಕರು ಸಹ ಮೋಮೊ ಚಾಲೆಂಜ್ ಕುರಿತಾಗಿ ಏನನ್ನೂ ಹೇಳಬಾರದು ಎಂದು ಇಲಾಖೆ ತಿಳಿಸಿದೆ.  ಮೋಮೊ ಚಾಲೆಂಜ್ ಬಲೆಗೆ ಬಿದ್ದಿರುವ ಮಕ್ಕಳ ಲಕ್ಷಣಗಳ ಬಗ್ಗೆಯೂ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೋಮೊ ಚಾಲೆಂಜ್ ಬಲೆಗೆ ಬಿದ್ದಿರುವ ಮಕ್ಕಳು ಸ್ನೇಹಿತರು ಹಾಗೂ ಪೋಷಕರಿಂದ ಅಂತರ ಕಾಯ್ದುಕೊಳ್ಳುತ್ತದೆ. ಚಾಲೆಂಜ್ ನ ಭಾಗವಾಗಿ ದೇಹದ ಮೇಲೆ ಯಾವುದಾದರೂ ಗಾಯಗಳಾಗಿರುತ್ತವೆ ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.