ಎಚ್ ಐ ವಿ, ಏಡ್ಸ್ ಕಾಯ್ದೆ- 2017 ಅನುಷ್ಠಾನ ಜಾರಿ
2017ರ ಎಚ್ ಐವಿ, ಏಡ್ಸ್ ಕಾಯ್ದೆ ಅನುಷ್ಠಾನಗೊಂಡಿದೆ. ನಿನ್ನೆಯಿಂದ ಈ ಕಾಯ್ದೆಯು ಅನುಷ್ಠಾನವಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ನವದೆಹಲಿ: 2017ರ ಎಚ್ ಐವಿ, ಏಡ್ಸ್ ಕಾಯ್ದೆ ಅನುಷ್ಠಾನಗೊಂಡಿದೆ. ನಿನ್ನೆಯಿಂದ ಈ ಕಾಯ್ದೆಯು ಅನುಷ್ಠಾನವಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಕಾಯ್ದೆಯ ಪ್ರಕಾರ 12 ರಿಂದ 18 ವರ್ಷದೊಳಗಿನ ಒಬ್ಬ ವ್ಯಕ್ತಿ ತನ್ನ ಎಚ್ಐವಿ ಅಥವಾ ಏಡ್ಸ್-ಪೀಡಿತ ಕುಟುಂಬವನ್ನು ಅರ್ಥಮಾಡಿಕೊಂಡು ರಕ್ಷಕನಾಗಿ ವರ್ತಿಸಬೇಕು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇತರರನ್ನು ಪೋಷಕರಂತೆ ಪಾಲನೆ ಮಾಡಬೇಕೆಂದು ಹೇಳುತ್ತದೆ.
ಶಿಕ್ಷಣ ಸಂಸ್ಥೆ ದಾಖಲು, ಬ್ಯಾಂಕ್ ಖಾತೆ ನಿರ್ವಹಣೆ, ಆಸ್ತಿ ನಿರ್ವಹಣೆ, ಕಾಳಜಿ, ಚಿಕಿತ್ಸೆ ಮತ್ತಿತರ ಎಲ್ಲಾ ವಿಷಯಗಳಿಗೆ ಈ ಅವಕಾಶ ಅನ್ವಯವಾಗುತ್ತದೆ. ಎಚ್ ಐವಿ, ಏಡ್ಸ್ ಪೀಡಿತ ವ್ಯಕ್ತಿಗಳ ವಿರುದ್ಧ ಶೋಷಣೆಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಎಚ್ ಐವಿ, ಏಡ್ಸ್ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡದಿರುವುದು, ಉದ್ಯೋಗ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ತಾರತಾಮ್ಯ ತಡೆಗಟ್ಟಲು ಏಪ್ರಿಲ್ 20. 2017 ರಂದು ಈ ಕಾಯ್ದೆ ಜಾರಿಯಾಗಿತ್ತು.
ನ್ಯಾಯಾಲಯದ ಆದೇಶದ ಹೊರತಾಗಿ ಉದ್ಯೋಗ ಅಥವಾ ಸೇವೆ ಪಡೆಯುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಎಚ್ ಐವಿ ಬಗ್ಗೆಯೂ ವಿವರ ಹಂಚಿಕೊಳ್ಳಬಾರದೆಂದು ಕಾಯ್ದೆ ಹೇಳುತ್ತದೆ.
ಎಚ್ ಐವಿ ಮತ್ತು ಏಡ್ಸ್ ಸಂಬಂದಿತ ಪ್ರಯೋಗಾಲಯ ಸವಲತ್ತು ಪಡೆಯಲು ಅಗತ್ಯ ಮಾರ್ಗದರ್ಶಿಸೂತ್ರಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


