ಪ್ರತ್ಯೇಕ ಸಂವಿಧಾನ ಸರಿಯಲ್ಲ ಹೇಳಿಕೆ: ದೋವಲ್ ವಿರುದ್ಧ ಪಿಡಿಪಿ ತೀವ್ರ ಕಿಡಿ
ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಸಂವಿಧಾನ ಹೊಂದಿರುವುದು ಸರಿಯಲ್ಲ ಎಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ಪಿಡಿಪಿ ಬುಧವಾರ ತೀವ್ರವಾಗಿ ಕಿಡಿಕಾರಿದೆ...

Published On :
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಸಂವಿಧಾನ ಹೊಂದಿರುವುದು ಸರಿಯಲ್ಲ ಎಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ಪಿಡಿಪಿ ಬುಧವಾರ ತೀವ್ರವಾಗಿ ಕಿಡಿಕಾರಿದೆ.
ದೋವಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಿಡಿಪಿ ನಾಯಕ ಮತ್ತು ವಕ್ತಾರ ರಫಿ ಮಿರ್ ಅವರು, ದೋವಲ್ ಅವರ ಹೇಳಿಕೆ ಅಸಮರ್ಥನೀಯವಾದದ್ದು ಎಂದು ಹೇಳಿದ್ದಾರೆ.
ಇಂತಹ ರೂಪನಿಷ್ಪತ್ತಿಯಿಲ್ಲದ ಹಾಗೂ ಅಸಮರ್ಥನೀಯ ಹೇಳಿಕೆಗಳು ಕಾಶ್ಮೀರದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ರಾಜಕೀಯ ದ್ವೇಷಗಳನ್ನು ಹುಟ್ಟುತ್ತವೆ. ದೋವಲ್ ಅವರ ಈ ಹೇಳಿಕೆಯಿಂದ ಅವರಲ್ಲಿ ಕಾಶ್ಮೀರ ಜನತೆ ಕುರಿತಂತೆ ಎಷ್ಟರ ಮಟ್ಟಿಗೆ ಸೂಕ್ಷ್ಮತೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ರಾಜ್ಯ ಎರಡು ದೇಶಗಳ ಸಿದ್ಧಾಂತವನ್ನು ತಿರಸ್ಕರಿಸಿ, ವಿಶ್ವಾಸದಿಂದ ಹಿಂದೂ ಬಹುಮತ ರಾಷ್ಟ್ರದೊಂದಿಗೆ ಸೇರಿಕೊಂಡಿರುವುದು ದುರಾದೃಷ್ಟಕರ. ನಮ್ಮ ಮೇಲೆ ದೌರ್ಜನ್ಯವಾಗುತ್ತಿದೆ. ವಿಶೇಷ ರಾಜ್ಯ ಸ್ಥಾನಮಾನದ ಮೂಲಕ ನಮ್ಮ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರPDPಪಿಡಿಪಿJammu and KashmirKashmirಕಾಶ್ಮೀರAjit Dovalಅಜಿತ್ ದೋವಲ್Separate constitutionಪ್ರತ್ಯೇಕ ಸಂವಿಧಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


