ದಕ್ಷಿಣ ಕೊಲ್ಕತ್ತಾದಲ್ಲಿ 40 ವರ್ಷದ ಹಳೆಯ ಮೇಲ್ಸೇತುವೆ ಕುಸಿತ: ಓರ್ವ ಸಾವು, 31 ಗಾಯ
ದಕ್ಷಿಣ ಕೋಲ್ಕತ್ತಾದ ತಾರತಲಾದಲ್ಲಿ 40 ವರ್ಷದಷ್ಟು ಹಳೆಯದಾದ ಮಾಜೇರ್ ಹಾಟ್ ಮೇಲ್ಸೇತುವೆ ಕುಸಿದಿದ್ದು ಓರ್ವ ಮೃತಪಟ್ಟಿದ್ದು ಹಲವು ಗಾಯಗೊಂಡಿದ್ದಾರೆ...

Published On :
ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ತಾರತಲಾದಲ್ಲಿ 40 ವರ್ಷದಷ್ಟು ಹಳೆಯದಾದ ಮಾಜೇರ್ ಹಾಟ್ ಮೇಲ್ಸೇತುವೆ ಕುಸಿದಿದ್ದು ಓರ್ವ ಮೃತಪಟ್ಟಿದ್ದು ಹಲವು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಐದು ವರ್ಷಗಳಲ್ಲಿ ಇದು 2ನೇ ಬೃಹತ್ ಮೇಲ್ಸೇತುವೆ ಕುಸಿತ ಪ್ರಕರಣವಾಗಿದೆ. ದುರಂತದಲ್ಲಿ 31 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆ ದಾಖಲಿಸಲಾಯಿತು. 13 ಮಂದಿ ಗಾಯಾಳುಗಳನ್ನು ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಿದ್ದು ಈ ಪೈರಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಇನ್ನು 18 ಜನರನ್ನು ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಿದ್ದು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು 10 ಮಂದಿ ಗಾಯಗೊಂಡಿದ್ದಾರೆ. ಇನ್ನು ಚಿಕಿತ್ಸೆ ನಂತರ 6 ಮಂದಿ ಗಾಯಾಳುಗಳನ್ನು ಡಿಸ್ಚಾರ್ಚ್ ಮಾಡಲಾಗಿದೆ.
ಘಟನೆ ನಡೆದಾಗ ಫ್ಲೈಓವರ್ ಮೇಲೆ ಒಂದು ಮಿನಿಬಸ್, ಐದು ಕಾರು ಮತ್ತು ಹಲವು ದ್ವಿಚಕ್ರ ವಾಹನಗಳು ಪ್ರಯಾಣಿಸುತ್ತಿದ್ದವು. ಕೋಲ್ಕತ್ತಾದಲ್ಲಿ ಎಡಬಿಡದೆ ಸುರಿಯುತ್ತಿರುವುದರಿಂದ ಈ ದುರಂತ ಸಂಭವಿಸಿದೆ.
ಹಲವಾರು ಬೈಕ್ ಸವಾರರು ಅವಶೇಷಗಳಡಿ ಸಿಲುಕಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಫ್ಲೈಓವರ್ ಕುಸಿತ ದುರಂತದ ಕುರಿತು ತಕ್ಷಣ ವರದಿ ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


