ಉತ್ತರಪ್ರದೇಶ: ವಿಶ್ವವಿದ್ಯಾಲಯದ ಪ್ರವೇಶ ಪತ್ರದಲ್ಲಿ ಅಮಿತಾಭ್ ಬಚ್ಚನ್ ಫೋಟೋ!
ಉತ್ತರಪ್ರದೇಶದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಯೊಬ್ಬರಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಫೋಟೋ ವನ್ನು ಹಾಕಿ ಪ್ರವೇಶ ಪತ್ರವನ್ನು ನೀಡಿದ್ದು, ಇದೀಗ ಭಾರೀ ಸದ್ದು ಮಾಡುತ್ತಿದೆ...

Published On :
ಗೊಂಡಾ: ಉತ್ತರಪ್ರದೇಶದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಯೊಬ್ಬರಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಫೋಟೋ ವನ್ನು ಹಾಕಿ ಪ್ರವೇಶ ಪತ್ರವನ್ನು ನೀಡಿದ್ದು, ಇದೀಗ ಭಾರೀ ಸದ್ದು ಮಾಡುತ್ತಿದೆ.
ಫೈಜಾಬಾದ್ ನಲ್ಲಿರುವ ವಿಶ್ವವಿದ್ಯಾಲಯವು ಅಮಿತ್ ದ್ವಿವೇದಿ ಎಂಬ ರವೀಂದ್ರ ಸಿಂಗ್ ಸ್ಮಾರಕ ಮಹಾವಿದ್ಯಾಲಯದ ಬಿಇಡಿ ವಿದ್ಯಾರ್ಥಿಯೊಬ್ಬರ ಪ್ರವೇಶಪತ್ರಕ್ಕೆ ಅಮಿತಾಭ್ ಬಚ್ಚನ್ ಫೋಟೋ ಮುದ್ರಿಸಿ ನೀಡಿದೆ.
ದ್ವಿತೀಯ ವರ್ಷದ ಪರೀಕ್ಷೆಗೆ ಸರಿಯಾಗಿಯೇ ಫೋಟೋವನ್ನು ಅಂಟಿಸಿ ಅರ್ಜಿ ಸಲ್ಲಿಸಿದ್ದೆ. ಪ್ರವೇಶ ಪತ್ರ ಪಡೆದಾಗ ಆಶ್ಚರ್ಯವುಂಟಾಯಿತು. ನನ್ನ ಫೋಟೋ ಬದಲಿಗೆ ಅಮಿತಾಭ್ ಬಚ್ಚನ್ ಫೋಟೋ ಇತ್ತು. ಮತ್ತೆ ದಾಖಲೆಗಳನ್ನು ನೀಡಿದಾಗ ಪರೀಕ್ಷೆ ಕುಳಿತುಕೊಳ್ಳುವಾಗ ಅವಕಾಶ ಸಿಕ್ಕಿದೆ. ಆದರೆ, ಅಂಕಪಟ್ಟಿಯಲ್ಲಿ ಅಮಿತಾಭ್ ಬಚ್ಚನ್ ಫೋಟೋವೇ ಬಂದು ಬಿಟ್ಟರೆ ಎಂದು ಚಿಂತೆ ಎದುರಾಗಿದೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.
ಈ ಅಚಾತುರ್ಯವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ವಿಶ್ವವಿದ್ಯಾಲಯವು, ವಿದ್ಯಾರ್ಥಿ ಅಥವಾ ಸೈಬರ್ ಕೆಫೆಯಿಂದಲೇ ತಪ್ಪಾಗಿರಬಹುದು ಎಂದು ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರವೇಶ ಪತ್ರstudentUttar pradeshಉತ್ತರಪ್ರದೇಶವಿದ್ಯಾರ್ಥಿAdmit cardAmitabh Bachchan imageಅಮಿತಾಭ್ ಬಚ್ಚನ್ ಫೋಟೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


