ಉಗ್ರ ಸಂಘಟನೆ ಸೇರಿದ ಎಂಬಿಎ ಪದವೀಧರ: ಮಗನ ಮರಳವಿಕೆಗಾಗಿ ಕಾಯುತ್ತಿರುವ ಕುಟುಂಬ
ಹಿಂಸೆಯ ಹಾದಿಯನ್ನು ಬಿಟ್ಟು ವಾಪಸ್ ಬರುವಂತೆ ಉಗ್ರ ಸಂಘಟನೆ ಸೇರಿರುವ ಮಗನಿಗೆ ಜಮ್ಮು ಕಾಶ್ಮೀರದ ದೊಡಾ ಜಿಲ್ಲೆಯ ಕುಟುಂಬವೊಂದು ಮಗನಿಗೆ ..

Published On :
ಜಮ್ಮು ಕಾಶ್ಮೀರ: ಹಿಂಸೆಯ ಹಾದಿಯನ್ನು ಬಿಟ್ಟು ವಾಪಸ್ ಬರುವಂತೆ ಉಗ್ರ ಸಂಘಟನೆ ಸೇರಿರುವ ಮಗನಿಗೆ ಜಮ್ಮು ಕಾಶ್ಮೀರದ ದೊಡಾ ಜಿಲ್ಲೆಯ ಕುಟುಂಬವೊಂದು ಮಗನಿಗೆ ಮನವಿ ಮಾಡಿದೆ.
ಹರೂನ್ ಅಬ್ಬಾಸ್ ವನಿ ಉಗ್ರ ಸಂಘಟನೆ ಸೇರಿರುವ ಯುವಕ. ಕತ್ರಾ ವಿವಿಯ ಎಂಬಿಎ ಪದವೀಧರನಾಗಿರುವ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಸೆಪ್ಟಂಬರ್ 1 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾನೆ, ವನಿ ಏಕೆ-47 ರೈಫಲ್ ಹಿಡಿದಿರುವ ಫೋಟೋವನ್ನು ಆತನ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದಾರೆ, ಇದನ್ನು ನೋಡಿ ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ವನಿ ಬ್ರಿಲಿಯಂಟ್ ವಿದ್ಯಾರ್ಥಿ, ಕತ್ರಾ ವಿವಿಯಲ್ಲಿ ಎಂಬಿಎ ಪದವಿ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತನ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ವನಿ ಚಿಕ್ಕಪ್ಪ ಫಾರೂಕ್ ವನಿ ಹೇಳಿದ್ದಾರೆ.
ಅವನು ಮಾಡಿದ್ದು ಸರಿಯಿಲ್ಲ, ಅವನು ಯಾವತ್ತೂ ಹಾಗೆ ಇರಲಿಲ್ಲ, ಯಾರು ಆತನನ್ನು ಹಿಡಿದಿರಿಸಿಕೊಂಡಿದ್ದಾರೋ ಅವರು ವಾಪಸ್ ಕಳಿಸಲಿ, ಅತನ ಪೋಷಕರಿಗೆ ವಯಸ್ಸಾಗಿದೆ, ಅವರ ತಾಯಿಗೆ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರನ್ನು ನೋಡಿಕೊಳ್ಳಬೇಕಾಗಿದೆ, ಹೀಗಾಗಿ ಆತನನ್ನು ವಾಪಸ್ ಕಳಿಸಬೇಕು ಎಂದು ಹೇಳಿದ್ದಾರೆ.
1990 ರಿಂದ ಈ ಉಗ್ರ ಸಂಘಟನೆ ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಭಾರತೀಯ ಸೈನ್ಯದಿಂದ ದಬ್ಬಾಳಿಕೆಯ ವಿರುದ್ಧ ಹೋರಾಟದ ಹೆಸರಿನಲ್ಲಿ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರJammu and Kashmirಉಗ್ರ ಸಂಘಟನೆಹಿಜ್ಬುಲ್ ಮುಜಾಹಿದ್ದೀನ್MBA studentterror outfitHizb-ul-Mujahideenಎಂಬಿಎ ಪದವೀಧರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


