ದೇಶ

ಮೋದಿಕೇರ್ ನ ಮೊದಲ ಫಲಾನುಭವಿ ಈ 19 ದಿನಗಳ ಹಸುಗೂಸು!

ಆಗಸ್ಟ್ 15 ರಂದು ಹರಿಯಾಣ ರಾಜ್ಯದ ಕರ್ನಲ್ ನ ಕಲ್ಪನಾ ಚಾವ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ 19 ದಿನದ ಹಸುಗೂಸು ಕರಿಷ್ಮಾ ಪ್ರಧಾನಮಂತ್ರಿ ಆಯುಷ್ಮನ್ ಭಾರತ್ ಯೋಜನೆಯ ಮೊದಲ ಫಲಾನುಭವಿ.

ಮೋದಿಕೇರ್ ನ ಮೊದಲ ಫಲಾನುಭವಿ ಈ 19 ದಿನಗಳ ಹಸುಗೂಸು!
ಸಾಂದರ್ಭಿಕ ಚಿತ್ರ
Published On :

ಕರ್ನಲ್ : ಆಗಸ್ಟ್  15 ರಂದು ಹರಿಯಾಣ ರಾಜ್ಯದ ಕರ್ನಲ್ ನ ಕಲ್ಪನಾ ಚಾವ್ಲಾ  ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ 19 ದಿನದ ಹಸುಗೂಸು ಕರಿಷ್ಮಾ ಪ್ರಧಾನಮಂತ್ರಿ ಆಯುಷ್ಮನ್ ಭಾರತ್ ಯೋಜನೆಯ ಮೊದಲ ಫಲಾನುಭವಿ.

ಈ ಯೋಜನೆಯ ಬಗ್ಗೆ  ಮೆಚ್ಚುಗೆ  ವ್ಯಕ್ತಪಡಿಸಿದ ಕರೀಷ್ಮಾ ತಾಯಿ ಮೌಸಾಮಿ, ಇದೊಂದು ಒಳ್ಳೆಯ ಯೋಜನೆಯಾಗಿದೆ. ಸರ್ಕಾರವೇ ಎಲ್ಲಾ ವೈಧ್ಯಕೀಯ ವೆಚ್ಚ ಭರಿಸಿದೆ  ಎಂದು ಹೇಳಿದರು.

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದ  ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಯೋಜನೆ ಸೆಪ್ಟೆಂಬರ್ 25 ರಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಆರೋಗ್ಯ ಸುರಕ್ಷತೆಯ ನೀತಿ ಈ ವರ್ಷದ ಆರಂಭದಿಂದ ಅನುಷ್ಠಾನಕ್ಕೆ ಬಂದಿತ್ತು. ಮೋದಿ ಕೇರ್ ಎಂದು ಕರೆಯಲಾಗುವ   ಆಯುಷ್ಮನ್ ಭಾರತ್ ಯೋಜನೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸರ್ಕಾರಿ ಜಾರಿಗೆ ತಂದಿತ್ತು.

ಸಾಮಾಜಿಕ ಆರ್ಥಿಕವಾಗಿ ಸಮೀಕ್ಷೆ ಆಧಾರದ ಮೇಲೆ 10 ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆ ವೆಚ್ಚಕ್ಕಾಗಿ   5 ಲಕ್ಷ ವಿಮೆಯನ್ನು ಒದಗಿಸುವ ಮಹತ್ವಕಾಂಕ್ಷಿಯ ಆರೋಗ್ಯ ಸುರಕ್ಷತಾ ವಿಮೆ ಇದಾಗಿದೆ.

ಈ  ಯೋಜನೆ ಮೂಲಕ ದೇಶದ ಯಾವುದೇ ಭಾಗದಲ್ಲೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ  ನಗದು ರಹಿತ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.