ಮುಖ್ಯಮಂತ್ರಿ, ಶಾಸಕನಾಗುವವರೆಗೆ ನನ್ನ ಬಳಿ ಕಾರ್ಯಾಚರಣೆಯಲ್ಲಿದ್ದ ಬ್ಯಾಂಕ್ ಖಾತೆಯೇ ಇರಲಿಲ್ಲ: ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರಾಗುವವರೆಗೆ ಸ್ವತಃ ಬ್ಯಾಂಕ್ ಖಾತೆಯನ್ನು ಹೊಂದಿರಲಿಲ್ಲ ಎಂದರೆ ನೀವು ನಂಬಲೇಬೇಕು.

Published On :
ಜನಸಾಮಾನ್ಯರು, ಬ್ಯಾಂಕ್ ಸೌಲಭ್ಯಗಳಿಂದ ವಂಚಿತರಾದವರನ್ನು ಬ್ಯಾಂಕ್ ವ್ಯವಸ್ಥೆಯೊಂದಿಗೆ ಬೆಸದ ಮತ್ತೊಂದು ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರಾಗುವವರೆಗೆ ಸ್ವತಃ ಬ್ಯಾಂಕ್ ಖಾತೆಯನ್ನು ಹೊಂದಿರಲಿಲ್ಲ ಎಂದರೆ ನೀವು ನಂಬಲೇಬೇಕು.
ಶಾಸಕನಾಗುವವರೆಗೆ ಕಾರ್ಯಾಚರಣೆಯಲ್ಲಿದ್ದ ಬ್ಯಾಂಕ್ ಖಾತೆ ನನ್ನ ಬಳಿ ಇರಲಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಭಾರತೀಯ ಅಂಚೆಯ ಪಾವತಿ ಬ್ಯಾಂಕ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದು, ಅಂದಿನ ದಿನಗಳಲ್ಲಿ ದೇನಾ ಬ್ಯಾಂಕ್ ವಿದ್ಯಾರ್ಥಿಗಳಿಗಾಗಿ ಪಿಗ್ಗಿ ಬ್ಯಾಂಕ್ ಸೌಲಭ್ಯ ನೀಡುತ್ತಿತ್ತು. ಶಾಲೆಗೆ ಹೋಗುತ್ತಿದ್ದಾಗ ನನಗೂ ಇಂಥಹದ್ದೇ ಒಂದು ಬ್ಯಾಂಕ್ ಖಾತೆ ಇತ್ತು. ಆದರೆ ನನ್ನ ಬಳಿ ಹಣ ಇರುತ್ತಿರಲಿಲ್ಲವಾದ ಕಾರಣ ನನ್ನದು ಯಾವಾಗಲೂ ಖಾಲಿ ಇರುತ್ತಿದ್ದ ಬ್ಯಾಂಕ್ ಖಾತೆಯಾಗಿತ್ತು.
ಬ್ಯಾಂಕ್ ಖಾತೆ ತೆರೆದ 32 ವರ್ಷಗಳ ಬಳಿಕ ಅದನ್ನು ಬಂದ್ ಮಾಡುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದರು. ಬ್ಯಾಂಕ್ ಖಾತೆಯೂ ಬಂದ್ ಆಯಿತು. ನಂತರ ಗುಜರಾತ್ ಶಾಸಕನಾದಾಗ ವೇತನ ಪಡೆಯುವುದಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಯಿತು ಅಲ್ಲಿಯವರೆಗೆ ನನ್ನ ಬಳಿ ಕಾರ್ಯಾಚರಣೆಯಲ್ಲಿದ್ದ ಬ್ಯಾಂಕ್ ಖಾತೆಯೇ ಇರಲಿಲ್ಲ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


