ದೇಶ

'ತಮಸೋಮ ಜ್ಯೋತಿರ್ಗಮಯ': ಮಾನಸ ಸರೋವರ ಯಾತ್ರೆಯಲ್ಲಿ ರಾಹುಲ್, ಶ್ಲೋಕ ಟ್ವೀಟ್

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಬಹು ನಿರೀಕ್ಷೆಯ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದಾರೆ...

'ತಮಸೋಮ ಜ್ಯೋತಿರ್ಗಮಯ': ಮಾನಸ ಸರೋವರ ಯಾತ್ರೆಯಲ್ಲಿ ರಾಹುಲ್, ಶ್ಲೋಕ ಟ್ವೀಟ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಬಹು ನಿರೀಕ್ಷೆಯ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದಾರೆ. 
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಯಲ್ಲಿ ಇಳಿಯುವಾಗ ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಎಡಭಾಗಕ್ಕೆವಾಲಿತ್ತು. ಆಗ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಮಾನಸ ಯಾತ್ರೆ ಕೈಗೊಳ್ಳುವುದಾಗಿ ಸಂಕಲ್ಪ ಮಾಡಿದ್ದರು. 
ರಾಹುಲ್ ಗಾಂಧಿಯವರ ಯಾತ್ರೆ ಕುರಿತಂತೆ ಲೇವಡಿ ಮಾಡಿದ್ದ ಬಿಜೆಪಿ, ಚೀನಾ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವ ರಾಹುಲ್, ಚೈನೀಸ್ ಮ್ಯಾನ್ ಆಗಿದ್ದಾರೆಂದು ಹೇಳಿತ್ತು. ಅಲ್ಲದೆ, ನೀವು ಚೈನೀಸ್ ಗಾಂಧಿಯೋ, ರಾಹುಲ್ ಗಾಂಧಿಯೋ ಎಂದು ಪ್ರಶ್ನಿಸಿತ್ತು. 
ಬಿಜೆಪಿಯ ಟೀಕೆಗೆ ಉತ್ತರವೆಂಬಂತೆ ಮಾನಸ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಅಸತೋಮಾ ಸದ್ಗಮಯಾ ಎಂಬ ಪ್ರಾರ್ಥನಾ ಶ್ಲೋಕದ ಸಾಲುಗಳನ್ನು ಬರೆದಿದ್ದಾರೆ. (ಅಸತ್ಯದಿಂದ ಸತ್ಯದೆಡೆಗೆ ನಮ್ಮನ್ನು ನಡಸೆಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಾಲುಗಳು ಇದಾಗಿದೆ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.