ಪೊಲೀಸರ ಆರೋಪಗಳು ಹಾಸ್ಯಾಸ್ಪದ: ಗೊನ್ಸಾಲ್ವ್ಸ್ ಪುತ್ರ
ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ವೆರ್ನನ್ ಗೊನ್ಸಾಲ್ವ್ಸ್ ಅವರ ವಿರುದ್ಧ ಪೊಲೀಸರು ಮಾಡಿರುವ ಅಪರಾಧ ಹಾಸ್ಯಾಸ್ಪದ ಎಂದು ಗೊನ್ಸಾಲ್ವ್ಸ್ ಪುತ್ರ ಹೇಳಿದ್ದಾರೆ.

Published On :
ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ವೆರ್ನನ್ ಗೊನ್ಸಾಲ್ವ್ಸ್ ಅವರ ವಿರುದ್ಧ ಪೊಲೀಸರು ಮಾಡಿರುವ ಅಪರಾಧ ಹಾಸ್ಯಾಸ್ಪದ ಎಂದು ಗೊನ್ಸಾಲ್ವ್ಸ್ ಪುತ್ರ ಹೇಳಿದ್ದಾರೆ.
ಆ.28 ರಂದು ಮಹಾರಾಷ್ಟ್ರದ ಪೊಲೀಸರು ಮಾವೋವಾದಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯ ಮೇಲೆ ವೆರ್ನನ್ ಗೊನ್ಸಾಲ್ವ್ಸ್ ಅವರ ಮನೆ ಮೇಲೆ ದಾಳಿ ನಡೆಸಿ, ಬಂಧ್ಸಿಇದ್ದರು. ಈ ಬೆನ್ನೆಲ್ಲೆ ನಾಲ್ವರು ನಕ್ಸಲ್ ಬೆಂಬಲಿಗರನ್ನು ಬಂಧಿಸಲಾಗಿತ್ತು.
ಮಾವೋವಾದಿಗಳ ಬೆಂಬಲಿಗರನ್ನು ಬಂಧಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಪೊಲೀಸರು ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಪತ್ರಗಳು ಎಡಪಂಥೀಯ ಕಾರ್ಯಕರ್ತರಿಗೂ-ಮಾವೋವಾದಿ ಉಗ್ರರಿಗೂ ಸಂಪರ್ಕ ಇರುವುದು ಸ್ಪಷ್ಟವಾಗಿತ್ತು ಎಂದು ಪೊಲೀಸರು ಹೇಳಿದ್ದರು.
"ಪೊಲೀಸರ ಆರೋಪ ಕೇಳಿ ನನಗೆ ನಗು ತಡೆಯುವುದಕ್ಕೆ ಆಗಲಿಲ್ಲ, ಅವರ ಆರೋಪಗಳು ಹಾಸ್ಯಾಸ್ಪದವಾಗಿದೆ ಎಂದು ಗೋನ್ಸಾಲ್ವ್ಸ್ ಪುತ್ರ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


