ದೇಶ

ಶಿವರಾಜ್ ಸಿಂಗ್ ಪುತ್ರನ ವಿರುದ್ಧ ಪನಾಮ ಆರೋಪ: ಕನ್ಫ್ಯೂಸ್ ಆಯ್ತು ಅಂದ್ರು ರಾಹುಲ್ ಗಾಂಧಿ

ಮಧ್ಯಪ್ರದೇಶ ಚುನಾವಣಾ ಸಮಾವೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ವಿರುದ್ಧ ಪನಾಮ ಪೇಪರ್ ಹಗರಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ತಮಗೆ ಗೊಂದಲ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಶಿವರಾಜ್ ಸಿಂಗ್ ಪುತ್ರನ ವಿರುದ್ಧ ಪನಾಮ ಆರೋಪ: ಕನ್ಫ್ಯೂಸ್ ಆಯ್ತು ಅಂದ್ರು ರಾಹುಲ್ ಗಾಂಧಿ
ಶಿವರಾಜ್ ಸಿಂಗ್ ಪುತ್ರನ ವಿರುದ್ಧ ಪನಾಮ ಆರೋಪ: ಕನ್ಫ್ಯೂಸ್ ಆಯ್ತು ಅಂದ್ರು ರಾಹುಲ್ ಗಾಂಧಿ
Published On :
ಮಧ್ಯಪ್ರದೇಶ ಚುನಾವಣಾ ಸಮಾವೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ  ವಿರುದ್ಧ ಪನಾಮ ಪೇಪರ್ ಹಗರಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ತಮಗೆ ಗೊಂದಲ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. 
ಪನಾಮ ಹಗರಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ದೇಶಾದ್ಯಂತ ಹಲವು ಭ್ರಷ್ಟಾಚಾರ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಗೊಂದಲದಲ್ಲಿ ಪನಾಮ ಹಗರಣದ ಆರೋಪ ಮಾಡಿಬಿಟ್ಟೆ ಎಂದು ಹೇಳಿದ್ದಾರೆ. 
ಬಿಜೆಪಿ ವಿರುದ್ಧ ಎಷ್ಟು ವ್ಯಾಪಕವಾದ ಹಗರಣಗಳಿವೆ ಎಂದರೆ ನಾನು ಗೊಂದಲಕ್ಕೀಡಾಗಿ ಪನಾಮ ಪೇಪರ್ಸ್ ಹಗರಣದ ಆರೋಪ ಮಾಡಿಬಿಟ್ಟೆ, ಆದರೆ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ವಿರುದ್ಧ ಪನಾಮ ಪೇಪರ್ ಹಗರಣದ ಆರೋಪವಿಲ್ಲ, ಬದಲಾಗಿ ಇ-ಟೆಂಡರಿಂಗ್ ಹಾಗೂ ವ್ಯಾಪಂ ಹಗರಣದ ಆರೋಪಗಳಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.