ದೇಶ

ನೀಚ ಕೃತ್ಯ: ಮಗಳನ್ನೇ ಕಾಮುತೃಷೆಗೆ ಬಳಸಿಕೊಂಡು ಗರ್ಭೀಣಿ ಮಾಡಿದ ತಂದೆ ಬಂಧನ!

ಕಳೆದ ಎರಡು ವರ್ಷಗಳಿಂದ ತಂದೆಯೇ ಮಗಳನ್ನು ನಿರಂತರವಾಗಿ ಸೆಕ್ಸ್ ಗೆ ಬಳಸಿಕೊಳ್ಳುತ್ತಿದ್ದು ಪರಿಣಾಮ ಅಪ್ರಾಪ್ತ ಬಾಲಕಿ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದು ಈ ಸಂಬಂಧ ಕಾಮುಕ ತಂದೆಯನ್ನು...

ನೀಚ ಕೃತ್ಯ: ಮಗಳನ್ನೇ ಕಾಮುತೃಷೆಗೆ ಬಳಸಿಕೊಂಡು ಗರ್ಭೀಣಿ ಮಾಡಿದ ತಂದೆ ಬಂಧನ!
ಸಂಗ್ರಹ ಚಿತ್ರ
Published On :
ಮುಂಬೈ: ಕಳೆದ ಎರಡು ವರ್ಷಗಳಿಂದ ತಂದೆಯೇ ಮಗಳನ್ನು ನಿರಂತರವಾಗಿ ಸೆಕ್ಸ್ ಗೆ ಬಳಸಿಕೊಳ್ಳುತ್ತಿದ್ದು ಪರಿಣಾಮ ಅಪ್ರಾಪ್ತ ಬಾಲಕಿ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದು ಈ ಸಂಬಂಧ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 
16 ವರ್ಷದ ಸಂತ್ರಸ್ತ ಬಾಲಕಿ ತಂದೆ ಹಾಗೂ ಅಣ್ಣನೊಂದಿಗೆ ಥಾಣೆಯಲ್ಲಿ ವಾಸವಾಗಿದ್ದಳು. ತನ್ನ ತಂಗಿ ಐದು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದ ಅಣ್ಣ ಶಾಕ್ ಆಗಿದ್ದು ಕೂಡಲೇ ಪೊಲೀಸ್ ಠಾಣೆಗೆ ಬಂದು ತಂದೆ ವಿರುದ್ಧ ದೂರು ನೀಡಿದ್ದಾನೆ.
ಸಂತ್ರಸ್ತ ಬಾಲಕಿಯ ತಂದೆಗೆ 52 ವರ್ಷ ವಯಸ್ಸಾಗಿದ್ದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ತನ್ನ ತಂಗಿಯ ದೇಹದಲ್ಲಾದ ಬದಲಾವಣೆಯನ್ನು ಗಮನಿಸಿದ ಅಣ್ಣ ತಂಗಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಬಾಲಕಿ ತನ್ನ ತಂದೆ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದ್ದಾಳೆ. 
2016ರಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಮೃತಪಟ್ಟಿದ್ದು ಆ ಬಳಿಕ ಕಾಮುಕ ತಂದೆ ಮಗಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನನ್ನನ್ನು ಹಾಗೂ ನನ್ನಣ್ಣನನ್ನು ಮನೆಯಿಂದ ಹೊರಗಡೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಬಾಲಕಿ ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.