ನಿಯಮ ಉಲ್ಲಂಘಿಸಿ ಭಾರತದ ವಾಯುಗಡಿ ದಾಟಿ ಹಾರಾಡಿದ ಚೀನಾ ಹೆಲಿಕಾಪ್ಟರ್'ಗಳು!
ಭಾರತದ ವಾಯುಗಡಿ ನಿಯಮ ಉಲ್ಲಂಘಿಸಿರುವ ಚೀನಾದ ಎರಡು ಹೆಲಿಕಾಪ್ಟರ್ ಗಳು, ಭಾರತ-ಚೀನಾ ನಡುವಿನ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಡಿ-ಫ್ಯಾಕ್ಟೋ ಗಡಿ ದಾಟಿ ಹಾರಾಡಿರುವ ಘಟನೆ ಬೆಳಕಿಗೆ ಬಂದಿದೆ...

Published On :
ನವದೆಹಲಿ: ಭಾರತದ ವಾಯುಗಡಿ ನಿಯಮ ಉಲ್ಲಂಘಿಸಿರುವ ಚೀನಾದ ಎರಡು ಹೆಲಿಕಾಪ್ಟರ್ ಗಳು, ಭಾರತ-ಚೀನಾ ನಡುವಿನ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಡಿ-ಫ್ಯಾಕ್ಟೋ ಗಡಿ ದಾಟಿ ಹಾರಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 27 ರಂದು ಈ ಘಟನೆ ನಡೆಸಿದ್ದು, ಸುಮಾರು 10 ನಿಮಿಷಗಳ ಕಾಲ ಚೀನಾದ ಹೆಲಿಕಾಪ್ಟರ್ ಗಳು ಹಾರಟ ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಲಡಾಕ್ ಹಾಗೂ ಟಿಬೆಟ್'ನ್ನು ಸಂಪರ್ಕಿಸುವ ಟ್ರೇಟ್ ಜಂಕ್ಷನ್ ಬಳಿ ಹೆಲಿಕಾಪ್ಟರ್ ಗಳು ಕಾಣಿಸಿಕೊಂಡಿದ್ದು, 10 ನಿಮಿಷಗಳ ಬಳಿಕ ಹಿಂತಿರುಗಿದವು ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕೂಡ ವಾಯು ಗಡಿಯನ್ನು ಉಲ್ಲಂಘನೆ ಮಾಡಿತ್ತು. ಈ ಘಟನೆ ನಡೆದ ವಾರಗಳ ಬಳಿಕ ಇದೀಗ ಚೀನಾ ಕೂಡ ವಾಯುಗಡೆ ನಿಯಮವನ್ನು ಉಲ್ಲಂಘನೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


