ವಿಡಿಯೋ: 46 ವರ್ಷದ ಯೋಗಿ ಕಾಲಿಗೆ ಬಿದ್ದ 66 ವರ್ಷದ ಛತ್ತೀಸ್ ಗಢ ಸಿಎಂ
ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸೋಮವಾರ ವಿಧಾನಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸುವ ...

Published On :
ರಾಜನಂದಗಾಂವ್: ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸೋಮವಾರ ವಿಧಾನಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸುವ ಮುನ್ನ ವಯಸ್ಸಿನಲ್ಲಿ ತಮಗಿಂತ 20 ವರ್ಷ ಕಿರಿಯರಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ.
66 ವರ್ಷದ ರಮಣ್ ಸಿಂಗ್ ಅವರು 46 ವರ್ಷದ ಯೋಗಿ ಆದಿತ್ಯನಾಥ್ ಅವರ ಪಾದಕ್ಕೆ ಎರಗಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೂರು ಬಾರಿ ಸಿಎಂ ಆಗಿರುವ ರಮಣ್ ಸಿಂಗ್ ಅವರು ರಾಜಕೀಯ ಅನುಭವದಲ್ಲೂ ಹಿರಿಯರು. 1970ರ ಆರಂಭದಲ್ಲಿ ರಮಣ್ ಸಿಂಗ್ ಜನಸಂಘಕ್ಕೆ ಸೇರಿದವರು, 1976-77ರಲ್ಲಿ ಜನಸಂಘದ ಯುವ ಘಟಕಕ್ಕೆ ಅಧ್ಯಕ್ಷರಾಗಿದ್ದರು. ಇನ್ನು ಯೋಗಿ ಆದಿತ್ಯನಾಥ್ 1972ರಲ್ಲಿ ಜನಿಸಿದವರು. ಆದರೆ ಅವರು ಗೋರಖ್ಪುರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ ಸನ್ಯಾಸಿಯಾಗಿದ್ದಾರೆ. ಸನ್ಯಾಸಿಯಾಗಿರುವ ಯೋಗಿ ಆದಿತ್ಯನಾಥರ ಪಾದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ತಾವು ಪ್ರಮಾಣವಚನ ಸಮಾರಂಭದ ವೇಳೆ ನಮಸ್ಕರಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


