ದೇಶ

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಹೋರಾಟಗಾರ್ತಿಗೆ ಪೊಲೀಸರಿಂದ ಭದ್ರತೆ : ಕಾಂಗ್ರೆಸ್ , ಬಿಜೆಪಿ ವಾಗ್ದಾಳಿ

ಶಬರಿಮಲೆಗೆ ಯತ್ನಿಸಿದ ಮಹಿಳಾ ಹೋರಾಟಗಾರ್ತಿಗೆ ಕೇರಳದ ಎಡಸರ್ಕಾರ ಬೆಂಬಲಿಸುವ ಮೂಲಕ ಭಕ್ತಾಧಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿವೆ.

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ  ಹೋರಾಟಗಾರ್ತಿಗೆ ಪೊಲೀಸರಿಂದ ಭದ್ರತೆ :  ಕಾಂಗ್ರೆಸ್ , ಬಿಜೆಪಿ ವಾಗ್ದಾಳಿ
ಪೊಲೀಸರ ಭದ್ರತೆಯಲ್ಲಿ ಶಬರಿಮೆಲೆಗೆ ತೆರಳುತ್ತಿದ್ದ ಹೋರಾಟಗಾರ್ತಿ ರೆಹಾನಾ ಫಾತಿಮಾ ಚಿತ್ರ
Published On :

ತಿರುವನಂತಪುರಂ: ಶಬರಿಮಲೆಗೆ  ಯತ್ನಿಸಿದ ಮಹಿಳಾ ಹೋರಾಟಗಾರ್ತಿಗೆ ಕೇರಳದ ಎಡಸರ್ಕಾರ ಬೆಂಬಲಿಸುವ ಮೂಲಕ ಭಕ್ತಾಧಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿವೆ.

ಅಧಿಕೃತ ಸಮವಸ್ತ್ರ ಹಾಗೂ ಹೆಲ್ಮೆಟ್ ಧರಿಸಿದ ಪೊಲೀಸರ ಬಿಗಿ ಭದ್ರತೆಯಲ್ಲಿ ಮಹಿಳಾ ಹೋರಾಟಗಾರ್ತಿಯೊಬ್ಬರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ಉಭಯ ಪಕ್ಷಗಳು ಆರೋಪಿಸಿವೆ.

ಹೈದರಾಬಾದ್ ಮೂಲದ ಪತ್ರಕರ್ತೆ ಹಾಗೂ ಕೊಚ್ಚಿ ಮೂಲದ ಹೋರಾಟಗಾರ್ತಿಯೊಬ್ಬರು  ಶಬರಿಮೆಲೆ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರ ಭದ್ರತೆಯಲ್ಲಿ ದೇಗುಲದ 18 ಮೆಟ್ಟಿಲುಗಳ ಸ್ವಲ್ಪ ದೂರ ತಲುಪಿದ್ದಾರೆ ಆದರೆ. ಭಕ್ತಾಧಿಗಳ ತೀವ್ರ ಪ್ರತಿಭಟನೆಯಿಂದ ನಂತರ ಅವರು ದರ್ಶನವಾಗದೆ ವಾಪಾಸ್  ಬಂದಿದ್ದಾರೆ.

ಈ ವಿಚಾರದಲ್ಲಿ ಎಲ್ ಡಿಎಫ್ ಸರ್ಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಲಾ, ನಿಜವಾದ ಭಕ್ತಾಧಿಗಳಿಗೆ ಪೊಲೀಸರು ಭದ್ರತೆ ನೀಡಿದ್ದಾರೆಯೇ ಕಮಾಂಡೋ ಕಾರ್ಯಾಚರಣೆಯಲ್ಲಿ ಮಹಿಳೆ ದೇವಾಲಯ ಪ್ರವೇಶಿಸುವುದೇ? ಇದು ಸರ್ವೋಚ್ಚ ನ್ಯಾಯಾಲಯದ ಆದೇಶವೇ? "ಎಂದು ಪ್ರಶ್ನಿಸಿದ್ದಾರೆ.

ಶಬರಿಮಲೆಯನ್ನು ಸಂಘರ್ಷಣೆಯ ಕೇಂದ್ರವಾಗಿ ರೂಪಿಸಲು ಕೇರಳ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇರಳ  ಬಿಜೆಪಿ ರಾಜ್ಯಾಧ್ಯಕ್ಷ  ಪಿ. ಎಸ್, ಶ್ರೀಧರನ್ ಪಿಲ್ಲಯ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.