ಮಧ್ಯ ಪ್ರದೇಶ: ಟ್ರಕ್ ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್, ಟ್ರಕ್ ಚಾಲಕ ಗಂಭೀರ
ಮಧ್ಯ ಪ್ರದೇಶದಲ್ಲಿ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಟ್ರಕ್ ಚಾಲಕ ಗಭೀರವಾಗಿ ಗಾಯಗೊಂಡಿದ್ದಾನೆ.

Published On :
ಭೋಪಾಲ್: ಮಧ್ಯ ಪ್ರದೇಶದಲ್ಲಿ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಟ್ರಕ್ ಚಾಲಕ ಗಭೀರವಾಗಿ ಗಾಯಗೊಂಡಿದ್ದಾನೆ.
ಮಧ್ಯ ಪ್ರದೇಶದ ತಾಂಡ್ಲಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 6.44ರ ಸಂದರ್ಭದಲ್ಲಿ ದೆಹಲಿ-ತಿರುವನಂತಪುರಂ ನಡುವೆ ಸಂಚರಿಸುವ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸೆ ಪ್ರೆಸ್ ರೈಲು ರೈಲ್ವೇ ಕ್ರಾಸಿಂಗ್ ಬಳಿ ಗೂಡ್ಸ್ ಟ್ರಕ್ ಗೆ ರೈಲು ಢಿಕ್ಕಿ ಹೊಡೆದಿದೆ.
ಪರಿಣಾಮ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ರೈಲಿನ ಬಿ7 ಮತ್ತು ಬಿ8 ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿದಂತೆ ರೈಲ್ವೇ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bhopalಭೋಪಾಲ್Madhya Pradeshಹಳಿ ತಪ್ಪಿದ ರೈಲುIndian Railwayಭಾರತೀಯ ರೈಲ್ವೇtrain Derailedರಾಜಧಾನಿ ಎಕ್ಸ್ ಪ್ರೆಸ್Rajdhani Expressಮದ್ಯ ಪ್ರದೇಶ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


