ದೇಶ

#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ

ಮಹಿಳೆಯರು ತಾವು ಎದುರಿಸಿರುವ ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನದಲ್ಲಿ ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ ಈ ವಿಷಯವಾಗಿ ಬ್ಯ್ಲಾಕ್ ಮೇಲ್ ಗೊಳಗಾಗಿರುವ ಪುರುಷರೂ ಸಹ ಈಗ ಹ್ಯಾಷ್ ಟ್ಯಾಗ್ ಅಭಿಯಾನ

#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ
#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ
Published On :
ಚೆನ್ನೈ: ಮಹಿಳೆಯರು ತಾವು ಎದುರಿಸಿರುವ ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನದಲ್ಲಿ ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ ಈ ವಿಷಯವಾಗಿ  ಬ್ಯ್ಲಾಕ್ ಮೇಲ್ ಗೊಳಗಾಗಿರುವ ಪುರುಷರೂ ಸಹ ಈಗ ಹ್ಯಾಷ್ ಟ್ಯಾಗ್ ಅಭಿಯಾನ ಪ್ರಾರಂಭಿಸಿದ್ದಾರೆ. 
ಮಹಿಳೆಯರಿಂದ ಬೆದರಿಕೆ ಎದುರಿಸುತಿರುವ ಪುರುಷರು #MeToo ಅಭಿಯಾನಕ್ಕೆ ಪರ್ಯಾಯವಾಗಿ #WeToo ಅಭಿಯಾನವನ್ನು ಪ್ರಾರಂಭಿಸಿದ್ದು ಮಹಿಳೆಯರಿಂದ ಎದುರಿಸುತ್ತಿರುವ ಕಿರುಕುಳಗಳನ್ನು ಹೇಳಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದಾರೆ. ಈಗಾಗಲೇ ಶಿಕ್ಷಣ ಕ್ಷೇತ್ರ, ಸಿನಿಮಾ ರಂಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವ 1,600 ಕ್ಕೂ ಹೆಚ್ಚು ಜನರು #WeToo ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. 
#weToo ಅಭಿಯಾನದ ಬಗ್ಗೆ ಮಾತನಾಡಿರುವ ಪತ್ರಕರ್ತರಾದ ವರಾಹಿ, ಮಹಿಳೆಯರಿಂದ ಕಿರುಕುಳ ಎದುರಿಸುತ್ತಿರುವ ಅನುಭವಗಳನ್ನು ಹಂಚಿಕೊಂಡಿರುವ ಪುರುಷ ಸಂತ್ರಸ್ತರ ಖಾಸಗಿ ವಿವರಗಳನ್ನು ಗೌಪ್ಯವಾಗಿಡಲಾಗುವುದು  ಎಂದು ಹೇಳಿದ್ದಾರೆ. 
ತಮಗಾದ ಕಿರುಕುಳವನ್ನು ವ್ಯಕ್ತಿಯೊಬ್ಬರು #weToo ಅಭಿಯಾನದ ಮೂಲಕ ಹಂಚಿಕೊಂಡಿದ್ದು, ಶೈಕ್ಷಣಿಕ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಮಹಿಳೆಯೊಬ್ಬರು ಬೆದರಿಕೆ ಹಾಕುತ್ತಿದ್ದಾರಂತೆ. ವಿಚಿತ್ರವೆಂದರೆ ಆ ಮಹಿಳೆ ಹಾಗೂ ಈಗ ಕಿರುಕುಳಕ್ಕೊಳಗಾಗಿರುವ ವ್ಯಕ್ತಿಗೂ ಕೆಲವು ವರ್ಷಗಳ ಹಿಂದೆ ಅಕ್ರಮ ಸಂಬಂಧ ಇತ್ತಂತೆ. 
#MeToo ಅಭಿಯಾನದಲ್ಲಿ ಹೆಸರು ಹಾಕದೇ ಇರುವುದಕ್ಕೆ ಮಧ್ಯವರ್ತಿಯನ್ನು ಬಳಸಿಕೊಂಡು ಆ ಮಹಿಳೆ 3 ಕೋಟಿಗೆ ಬೇಡಿಕೆ ಇಟ್ಟಿದ್ದರು ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.