ರಾಫೆಲ್ ಡೀಲ್: ರಿಲಯನ್ಸ್ ಜೊತೆಗಿನ ಒಪ್ಪಂದ ಶೇ.10ರಷ್ಟು ಮಾತ್ರ - ಡಸಾಲ್ಟ್ ಸಿಇಒ
36 ರಾಫೆಲ್ ಯುದ್ಧ ವಿಮಾನ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಯಲ್ಲಿ...

Published On :
ನವದೆಹಲಿ: 36 ರಾಫೆಲ್ ಯುದ್ಧ ವಿಮಾನ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಯಲ್ಲಿ ಜಂಟಿ ಕಾರ್ಖಾನೆ ತೆರೆಯಲಾಗುತ್ತಿದೆ. ಆದರೆ, ರಾಫೆಲ್ ಡೀಲ್ ನಲ್ಲಿ ರಿಲಯನ್ಸ್ ಕೇವಲ ಶೇ. 10 ರಷ್ಟು ಮಾತ್ರ ಬಾಧ್ಯತೆ ಹೊಂದಿದೆ ಎಂದು ಡಸಾಲ್ಟ್ ಸಿಇಒ ಎರಿಕ್ ಟ್ರಾಪ್ಪಿಯರ್ ಅವರು ಹೇಳಿದ್ದಾರೆ.
ಶೇ.10 ರಷ್ಟು ಬಾಧ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ನಾವು ರಿಲಯನ್ಸ್ ಜತೆ ಸೇರಿ ನಾಗ್ಪುರದಲ್ಲಿ ಜಂಟಿ ಕಾರ್ಖಾನೆ ಸ್ಥಾಪಿಸುತ್ತಿದ್ದೇವೆ. ಇದೇ ರೀತಿ, ನಾವು ಭಾರತದ ಸುಮಾರು 100 ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಈ ಪೈಕಿ, ಈಗಾಗಲೇ 30 ಕಂಪನಿಗಳ ಜತೆ ಒಪ್ಪಂದವಾಗಿದೆ ಎಂದು ಏರಿಕ್ ತಿಳಿಸಿದ್ದಾರೆ.
'ಆಫ್‌ಸೆಟ್ಸ್ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದ ಕಾನೂನಿನಲ್ಲಿ ಇರುವ ಷರತ್ತು. ಆದರೆ, ಭಾರತದ ಕಾನೂನಿನ ಪ್ರಕಾರ ಪಾಲುದಾರರನ್ನು ಆಯ್ಕೆ ಮಾಡುವ ಅಧಿಕಾರ ನಮಗೇ ಇರುತ್ತದೆ'. ಜತೆಗೆ, ಸದ್ಯ ರಫೇಲ್ ಡೀಲ್ ವಿಚಾರವಾಗಿ ರಾಜಕೀಯ ವಾದವಿವಾದ ನಡೆಯುತ್ತಿದ್ದರೂ ಸಹ ಭವಿಷ್ಯದ ಬಗ್ಗೆ ನಾವು ಆಶಾಭಾವನೆ ಹೊಂದಿದ್ದೇವೆ ಎಂದು ಡಸಾಲ್ಟ್ ಸಿಇಒ ಹೇಳಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಕಂಪನಿಗೆ ಯುದ್ಧ ವಿಮಾನ ತಯಾರಿಕೆಯ ಹೊಣೆ ವಹಿಸಲಾಗಿತ್ತು. ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗಾಗಿ ಭಾರತದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಪಾಲಿದಾರ ಕಂಪನಿಯನ್ನಾಗಿ ಡಸಾಲ್ಟ್ ಆರಿಸಿಕೊಂಡಿತ್ತು. ಆದರೆ ರಾಫೆಲ್ ಡೀಲ್ ನಲ್ಲಿ ಬಹುಕೋಟಿ ಅವ್ಯವಹಾರ ಸಂಭವಿಸಿದೆ, ಮತ್ತು ರಿಲಯನ್ಸ್ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಲು ಬೇಕೆಂದೇ ಫ್ರಾನ್ಸ್ ಮೇಲೆ ಒತ್ತಡ ಹೇರಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


