ಇದೆಂಥಾ ಸ್ವಚ್ಛಭಾರತ್? ರಾಜಸ್ತಾನ ಸಿಎಂ ವಸುಂದರಾ ರಾಜೆ ಫೋಟೋ ಪಕ್ಕದಲ್ಲೇ ಸಚಿವನ ಮೂತ್ರ ವಿಸರ್ಜನೆ!
ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂದರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

Published On :
ಅಜ್ಮೀರ್: ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂದರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಂಬು ಸಿಂಗ್ ಅವರು, ಮುಖ್ಯಮಂತ್ರಿ ಕ್ಯಾಂಪೇನ್ ಪೋಸ್ಟರ್ ಬಳಿ ನಾನು ಮೂತ್ರ ಮಾಡಿಲ್ಲ. ವಯೋವೃದ್ಧ ಸಮಸ್ಯೆಯಿಂದ ಬಯಲಿನಲ್ಲಿ ಮೂತ್ರ ಮಾಡಿದೆ. ಬಯಲಿನಲ್ಲಿ ಮೂತ್ರ ಮಾಡುವುದು ಒಲ್ಡ್ ಏಜ್ ಟ್ರಡಿಷನ್ ಅಂತ ಹೇಳಿದ್ದಾರೆ.
ಇನ್ನು ಯಾರು ಇಲ್ಲದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಅಂತ ಸಮಜಾಯಷಿ ನೀಡಿದ್ದಾರೆ. ಮೂತ್ರ ವಿಸರ್ಜನೆ ಮಾಡಿದ್ದ ಪ್ರದೇಶ ಬಿಜೆಪಿ ರ್ಯಾಲಿ ಪ್ರದೇಶವಾಗಿತ್ತು. ಈ ರ್ಯಾಲಿಯಲ್ಲಿ 2.5 ಲಕ್ಷ ಜನ ಸೇರಿದ್ದರು. ಹತ್ತಿರದಲ್ಲಿ ಯಾವುದೇ ಶೌಚಾಲಯಗಳು ಇರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿಸ್ವಚ್ಛ ಭಾರತ್ ಅಭಿಯಾನRajasthanSwachh Bharat MissionVasundhara Rajeurinateಮೂತ್ರ ವಿಸರ್ಜನೆರಾಜಸ್ತಾನ್ವಸುಂದರಾ ರಾಜೆShambhu Singh Khetasarಶಂಬು ಸಿಂಗ್ ಖಟೇಸರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


