ದೇಶ

ತ್ರಿಪುರಾ: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸೂಚನೆ ನೀಡಿದ ಸಿಎಂ ಬಿಪ್ಲಬ್ ದೇವ್

ಅಸ್ಸಾಂ ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಜಾರಿಗೆ ತರುವುದಾಗಿ ಸಿಎಂ ಬಿಪ್ಲಬ್ ದೇವ್ ಹೇಳಿದ್ದಾರೆ.

ತ್ರಿಪುರಾ: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸೂಚನೆ ನೀಡಿದ ಸಿಎಂ ಬಿಪ್ಲಬ್ ದೇವ್
ಬಿಪ್ಲಬ್ ದೇವ್
Published On :
ನವದೆಹಲಿ: ಅಸ್ಸಾಂ  ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಜಾರಿಗೆ ತರುವುದಾಗಿ ಸಿಎಂ ಬಿಪ್ಲಬ್ ದೇವ್ ಹೇಳಿದ್ದಾರೆ. 
ಬಾಂಗ್ಲಾದಿಂದ ಬಂದಿರುವ ಅಕ್ರಮ ವಲಸಿಗರನ್ನು ಗುರುತಿಸುವುದಕ್ಕಾಗಿ ಅಸ್ಸಾಂ ನಲ್ಲಿ ಎನ್ಆರ್ ಸಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಅಸ್ಸಾಂ ನಲ್ಲಿ ಯಶಸ್ವಿಯಾದರೆ ಅದನ್ನು ತ್ರಿಪುರಾದಲ್ಲೂ ಅಳವಡಿಸುತ್ತೇವೆ, ಅಸ್ಸಾಂ ನಲ್ಲಿ ಏನಾಗಲಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದೇವೆ ಎಂದು ಬಿಪ್ಲಬ್ ದೇವ್ ಹೇಳಿದ್ದಾರೆ. 
ಇಂಡಿಯಾ ಟುಡೆ ಕಾನ್ಲೇವ್ ಈಸ್ಟ್ 2018 ರಲ್ಲಿ ಭಾಗವಹಿಸಿ ಮಾತನಾಡಿರುವ ಬಿಪ್ಲಬ್ ದೇವ್, ಅಸ್ಸಾಂ ನಲ್ಲಿ ಎನ್ ಆರ್ ಸಿ ಯಶಸ್ವಿಯಾಗಿ ಜಾರಿಯಾದರೆ ಅದನ್ನು ತ್ರಿಪುರಾದಲ್ಲೂ ಅಳವಡಿಸಿಕೊಳ್ಳುತ್ತೇವೆ ತ್ರಿಪುರಾ ಅಷ್ಟೇ ಅಲ್ಲದೇ ಇನ್ನೂ ಅನೇಕ ರಾಜ್ಯಗಳು ಎನ್ ಆರ್ ಸಿಯನ್ನು ಜಾರಿಗೊಳಿಸಲು ಮುಂದಾಗಲಿವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.