ದೇಶ

ಬಿಜೆಪಿ ಒನ್ ಮ್ಯಾನ್ ಶೋ, ಟೂ ಮ್ಯಾನ್ ಆರ್ಮಿ: ಶತೃಘ್ನ ಸಿನ್ಹಾ ಲೇವಡಿ

ನಾನು ಬಿಜೆಪಿಗಿಂತಲೂ ಭಾರತೀಯ ಜನತೆಗೆ ಸೇರಿದವನಾಗಿದ್ದೇನೆ' ಎಂದು ಅತೃಪ್ತ ಬಿಜೆಪಿ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ...

ಬಿಜೆಪಿ ಒನ್ ಮ್ಯಾನ್ ಶೋ, ಟೂ ಮ್ಯಾನ್ ಆರ್ಮಿ: ಶತೃಘ್ನ ಸಿನ್ಹಾ ಲೇವಡಿ
ಶತ್ರುಘ್ನ ಸಿನ್ಹಾ
Published On :
ಪಾಟ್ನಾ: ನಾನು ಬಿಜೆಪಿಗಿಂತಲೂ ಭಾರತೀಯ ಜನತೆಗೆ ಸೇರಿದವನಾಗಿದ್ದೇನೆ' ಎಂದು ಅತೃಪ್ತ ಬಿಜೆಪಿ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ. 
"ಭಾರತೀಯ ಜನತಾ ಪಕ್ಷ ಈಗ ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ' ಎಂಬಂತಾಗಿದೆ ಎಂದು ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಲೇವಡಿ ಮಾಡಿದ್ದಾರೆ.
ಪಾಟ್ನಾದ ಸಾಹಿಬ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, "ನಾನು ಯಾವುದೇ ಪಕ್ಷಕ್ಕೆ ನಿಷ್ಠನಾಗಿರುವ ಮೊದಲು ಭಾರತೀಯ ಜನತೆಗೆ ನಿಷ್ಠನಾಗಿದ್ದೇನೆ' ಎಂದು  ಹೇಳಿದ್ದಾರೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ  ಸರ್ಕಾರದ ಮೂರು ಮಂತ್ರಿಗಳ ಹೆಸರನ್ನು ಕೇಳಲು ಪ್ರಯತ್ನಿಸಿ, ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ನಂತರ ಅಮಿತ್ ಶಾ ಹೆಸರು ಹೇಳುತ್ತಾರೆ, ಆದರೆ ಅವರು ಮಂತ್ರಿಗಳಲ್ಲ ,ಇಡೀ ದೇಶ ನೋಟು ಅಮಾನ್ಯೀಕರಣದಿಂದಾಗಿ ಬಳಲಿದೆ. ಜನ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ, ಇದರ ಬೆನ್ನಲ್ಲೇ ಜಿಎಸ್ ಟಿ ಎಂಬ ಹೊಸ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.