ಗೌತಮ್ ನವಲಕರನ್ನು ಗೃಹ ಬಂಧನದಿಂದ ಮುಕ್ತಿಗೊಳಿಸಿದ ದೆಹಲಿ ಹೈಕೋರ್ಟ್ !
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಐವರು ಸಾಮಾಜಿಕ ಹೋರಾಟಗಾರರ ಪೈಕಿ ಒಬ್ಬರಾಗಿದ್ದ ಗೌತಮ್ ನವಲಕ ಅವರನ್ನು ದೆಹಲಿ ಹೈಕೋರ್ಟ್ ಇಂದು ಗೃಹ ಬಂಧನದಿಂದ ಮುಕ್ತಿಗೊಳಿಸಿದೆ.

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಐವರು ಸಾಮಾಜಿಕ ಹೋರಾಟಗಾರರ ಪೈಕಿ ಒಬ್ಬರಾಗಿದ್ದ ಗೌತಮ್ ನವಲಕ ಅವರನ್ನು ದೆಹಲಿ ಹೈಕೋರ್ಟ್ ಇಂದು ಗೃಹ ಬಂಧನದಿಂದ ಮುಕ್ತಿಗೊಳಿಸಿದೆ.
ಗೌತಮ್ ನವಲಂಕರಿಗೆ ರಿಲೀಪ್ ನೀಡಿರುವ ಹೈಕೋರ್ಟ್, ಬಿಡುಗಡೆಗಾಗಿ ನಾಲ್ಕು ವಾರಗಳಲ್ಲಿ ಸೂಕ್ತ ವೇದಿಕೆ ಬಳಸಿಕೊಳ್ಳಲು ಸುಪ್ರೀಂಕೋರ್ಟ್ ಕಳೆದ ವಾರ ಸ್ವಾತಂತ್ರ್ಯ ನೀಡಿತ್ತು ಎಂದು ಹೇಳಿದೆ.
ವಿಚಾರಣಾ ನ್ಯಾಯಾಲಯದ ಟ್ರಾನ್ಸಿಟ್ ರಿಮಾಂಡ್ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ವಿಷಯ ಕುರಿತು ಸುಪ್ರೀಂಕೋರ್ಟ್ ಗೆ ಪ್ರಶ್ನಿಸುವುದಾಗಿ ನವಲಂಕ ಹೇಳಿದ್ದಾರೆ. ನವಲಕ ರ ಬಂಧನ ಅವಧಿಯನ್ನು 24 ಗಂಟೆಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಿದದ್ದು ಅಸಮರ್ಥನೀಯವಾದದ್ದು ಎಂದು ಹೈಕೋರ್ಟ್ ಹೇಳಿದೆ.
ಆಗಸ್ಟ್ 28 ರಂದು ದೆಹಲಿಯಲ್ಲಿ ನವಲಕ ಅವರನ್ನು ಬಂಧಿಸಲಾಗಿತ್ತು. ಅದೇ ದಿನ ವಿವಿಧ ಕಡೆಗಳಲ್ಲಿ ಇತರ ನಾಲ್ವರು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು.
ಐವರು ಸಾಮಾಜಿಕ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬ ಮನವಿಯನ್ನು ಸೆಪ್ಟೆಂಬರ್ 29 ರಂದು ತಿರಸ್ಕರಿಸಿದ ಸುಪ್ರೀಂಕೋರ್ಟ್, ರಾಜಕೀಯ ಸಿದ್ದಾಂತದ ವ್ಯತ್ಯಾಸದ ಕಾರಣ ಅಥವಾ ಅಸಮ್ಮತಿ ವ್ಯಕ್ತಪಡಿಸುವುದಕ್ಕಾಗಲೀ ಇವರನ್ನು ಬಂಧಿಸಿಲ್ಲ ಎಂದು ಹೇಳಿಕೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


