ದೇಶ

ಯುಪಿಎ ಸರ್ಕಾರದ ಜಿಡಿಪಿಗೆ ಕತ್ತರಿ: ಸಿಎಸ್ ಒ ಕ್ರಮ ಸಮರ್ಥಿಸಿಕೊಂಡ ಜೇಟ್ಲಿ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ)ಕ್ಕೆ ಕತ್ತರಿ ಹಾಕಿದ ಎನ್ ಡಿಎ ಸರ್ಕಾರದ...

ಯುಪಿಎ ಸರ್ಕಾರದ ಜಿಡಿಪಿಗೆ ಕತ್ತರಿ: ಸಿಎಸ್ ಒ ಕ್ರಮ ಸಮರ್ಥಿಸಿಕೊಂಡ ಜೇಟ್ಲಿ
ಅರುಣ್ ಜೇಟ್ಲಿ
Published On :
ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ)ಕ್ಕೆ ಕತ್ತರಿ ಹಾಕಿದ ಎನ್ ಡಿಎ ಸರ್ಕಾರದ ಕ್ರಮವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಮರ್ಥಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರಿಯ ಸಾಂಖ್ಯಿಕ ಕಚೇರಿ(ಸಿಎಸ್ ಒ) ಪರಿಷ್ಕೃತ ಜಿಡಿಪಿ ಬಿಡುಗಡೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಪರಸ್ಪರ ಕೆಸರೆರಚಾಟ ಆರಂಭಿಸಿದ್ದಾರೆ.
ಪರಿಷ್ಕೃತ ಜಿಡಿಪಿ ದರವನ್ನು ಸಮರ್ಥಿಸಿಕೊಂಡಿರುವ ಜೇಟ್ಲಿ, ಸಿಎಸ್ಒ ಅತ್ಯಂತ ವಿಶ್ವಸಾರ್ಹ ಸಂಸ್ಥೆ ಎಂದು ಹೇಳಿದ್ದಾರೆ.
ಅತ್ಯಂತ ವಿಶ್ವಸಾರ್ಹ ಸಂಸ್ಥೆ ಸಿಎಸ್ ಒ ಬಿಡುಗಡೆ ಮಾಡಿರುವ ಜಿಡಿಪಿ ದರದಲ್ಲಿ ಯಾವುದೇ ದೋಷ ಕಾಣುತ್ತಿಲ್ಲ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನಿನ್ನೆ ಸಿಎಸ್ ಒ ಬಿಡುಗಡೆ ಮಾಡಿರುವ 2005-06 ರಿಂದ 2017-18ರವರೆಗಿನ ಪರಿಷ್ಕೃತ ಜಿಡಿಪಿ ದರ ಪಟ್ಟಿಯಲ್ಲಿ ಯುಪಿಎ ಆಡಳಿತದ ಸರಾಸರಿ ಜಿಡಿಪಿ ದರ ಶೇ.6.7 ಇದ್ದರೆ ಎನ್​ಡಿಎ ಸರ್ಕಾರದ್ದು ಶೇ. 7.35 ರಷ್ಟಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​, ‘ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರ ಕಳ್ಳರ ಸರ್ಕಾರ’ ಎಂದು ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.