ಲೋಕಸಭೆ ಚುನಾವಣೆಯೊಂದಿಗೆ ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ!
ಇತ್ತೀಚಿಗಷ್ಟೇ ವಿಸರ್ಜನೆಯಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೇ 21ರೊಳಗೆ ಚುನಾವಣೆಗೆ ನಡೆಸಬೇಕಾಗಿದ್ದು,...

Published On :
ನವದೆಹಲಿ: ಇತ್ತೀಚಿಗಷ್ಟೇ ವಿಸರ್ಜನೆಯಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೇ 21ರೊಳಗೆ ಚುನಾವಣೆಗೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯೊಂದಿಗೆ ಕಣಿವೆ ರಾಜ್ಯದ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಗುರುವಾರ ಉನ್ನತ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನವೆಂಬರ್ 21ರಂದು ವಿಭಿನ್ನ ಸಿದ್ಧಾಂತ ಹೊಂದಿದ ಪಕ್ಷಗಳ ಮೈತ್ರಿಕೂಟದಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿ ವಿಧಾನಸಭೆಯನ್ನು ವಿಸರ್ಜಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮೇ 21ರವರೆಗೆ ಸಮಯ ಇದ್ದು, ಅದೇ ವೇಳೆಗೆ ಲೋಕಸಭೆಯ ಅವಧಿ ಸಹ ಮುಗಿಯುವುದರಿಂದ ಸಾರ್ವತ್ರಿಕ ಚುನಾವಣೆಯೊಂದಿಗೆ ಕಾಶ್ಮೀರ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾಸಭೆಯ ಅವಧಿ ಮಾರ್ಚ್ 16, 2021ಕ್ಕೆ ಅಂತ್ಯಗೊಳಲಿತ್ತು. ಆದರೆ ಬಿಜೆಪಿ, ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆ ನಂತರ ಕಾಶ್ಮೀರದಲ್ಲಿ ಆರು ತಿಂಗಳ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು. ರಾಜ್ಯಪಾಲರ ಆರು ತಿಂಗಳ ಆಡಳಿತ ಅಂತ್ಯಗೊಳ್ಳುತ್ತಿದ್ದಂತೆ ಪಿಡಿಪಿ, ಕಾಂಗ್ರೆಸ್ ಮತ್ತು ಎನ್ ಸಿ ಸೇರಿಕೊಂಡು ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದವು. ಆದರೆ ಇದಕ್ಕೆ ಅವಕಾಶ ಕೊಡದ ಮಲಿಕ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರJammu and KashmirElection Commissionಚುನಾವಣಾ ಆಯೋಗಲೋಕಸಭಾ ಚುನಾವಣೆLok Sabha elections
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


