ಉಚಿತ ವೈ-ಫೈ ಗಾಗಿ ಉಪಗ್ರಹ ಉಡಾವಣೆ!
ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡುವ ಚೀನಾ ಈಗ ಉಚಿತವಾಗಿ ವಿಶ್ವಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ.

Published On :
ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡುವ ಚೀನಾ ಈಗ ಉಚಿತವಾಗಿ ವಿಶ್ವಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ.
ಸಂವಹನ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಉಪಗ್ರಹ ಉಡಾವಣೆ ಮಾಡುತ್ತಿದ್ದು, ಲಿಂಕ್ ಶ್ಯೂರ್ ನೆಟ್ವರ್ಕ್ ನ ಪ್ರಕಾರ ಚೀನಾದ ವಾಯುವ್ಯ ಪ್ರಾಂತ್ಯದಲ್ಲಿ ಜಿಯುಕ್ವಾನ್ ಸ್ಯಾಟಲೈಟ್ ಲಾಂಚ್ ಸೆಂಟರ್ ನಿಂದ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮುಂದಿನ ವರ್ಷ ಉಪಗ್ರಹ ಉಡಾವಣೆಯಾಗಲಿದ್ದು, 2020 ರ ವೇಳೆಗೆ 10 ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಂಸ್ಥೆ ಯೋಜನೆ ಹೊಂದಿದೆ. ಈ ಉಪಗ್ರಹ ಉಡಾವಣೆಯಿಂದಾಗಿ ಮೊಬೈಲ್ ನೆಟ್ವರ್ಕ್ ಇಲ್ಲದೇ ಇರುವ ಪ್ರದೇಶಗಳಲ್ಲಿಯೂ ಉಪಗ್ರಹಗಳ ಸಹಾಯದಿಂದ ಇಂಟರ್ ನೆಟ್ ನ್ನು ಬಳಕೆ ಮಾಡಬಹುದಾಗಿದೆ ಎಂದು ಪೀಪಲ್ಸ್ ಡೈಲಿ ವರದಿ ಪ್ರಕಟಿಸಿದೆ.
ಈ ಯೋಜನೆಗಾಗಿ ಲಿಂಕ್ ಶ್ಯೂರ್ ಸಂಸ್ಥೆ 3 ಬಿಲಿಯನ್ ಯುವಾನ್ ನ್ನು ಹೂಡಿಕೆ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


