ದೇಶ

ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತ ರಾಜಸ್ಥಾನವನ್ನು ಗೆಲ್ಲುವುದು ಮುಖ್ಯ: ಸಚಿನ್ ಪೈಲಟ್

ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದಕ್ಕಿಂತಲೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಅತ್ಯಂತ ಮುಖ್ಯ ಎಂದು ರಾಜಸ್ಥಾನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ....

ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತ ರಾಜಸ್ಥಾನವನ್ನು ಗೆಲ್ಲುವುದು ಮುಖ್ಯ: ಸಚಿನ್ ಪೈಲಟ್
ಸಚಿನ್ ಪೈಲಟ್
Published On :
ಜೈಪುರ: ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದಕ್ಕಿಂತಲೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಅತ್ಯಂತ ಮುಖ್ಯ ಎಂದು ರಾಜಸ್ಥಾನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಸಚಿನ್ ಪೈಲಟ್ ಹೇಳಿದರು.
ರಾಜಸ್ಥಾನದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಕಮಲ ಪಕ್ಷವನ್ನು ಜ್ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ಏರಬೇಕು. ಐದಕ್ಕಾಗಿ ನಮ್ಮ ಶಾಸಕರು ಹೆಚ್ಚು ಸಂಖ್ಯೆಯಲ್ಲಿ ಆರಿಸಿ ಬರುವಂತಾಗಬೇಕು. ಇದಾದ ಬಳಿಕ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಬಹುದು ಎಂದು ಅವರು ಹೇಳಿದ್ದಾರೆ. ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಅಪಿಲಟ್ ನಡುವೆ ಮ್ಯುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುರಿತು ಪಕ್ಷದ ಮುಖಂಡರಲ್ಲೇ ಭಿನ್ನಾಭಿಪ್ರಾಯವಿದೆ.
ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಮುಖ್ಯಮಂತ್ರಿ ಪದವಿಗಾಗಿ ಸ್ಪರ್ಧೆ ಇದೆ ಎನ್ನಲಾಗುತ್ತಿದೆ ಆದರೆ ಇಬ್ಬರೂ ನಾಯಕರು ಈ ವಾದವನ್ನು ತಿರಸ್ಕರಿಸಿದ್ದಾರೆ.
"ಕಾಂಗ್ರೆಸ್  ಕಳೆದ 70 ವರ್ಷಗಳಿಂದ ಪಾಲಿಸಿಕೊಂಡು ಬಂದ ನೀತಿಯಂತೆ ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಕೊಳ್ಳುವುದಿಲ್ಲ. ಮುಖ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕು. ಈ ಮೂಲಕ ಬಿಜೆಪಿಯ ಹಣ ಬಲ ಹಾಗೂ ಅಧಿಕಾರಯುತ ಬಲಪ್ರಯೋಗ ನಿಲ್ಲುಯ್ವಂತಾಗಬೇಕು ಎನ್ನುವುದು ನಮ್ಮ ಆದ್ಯತೆ ಎಂದು ಪೈಲಟ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಚುನಾವಣೆ ಬಳಿಕ ಸಹ ಗೆಹ್ಲೋಟ್ ಮುಖ್ಯಮಂತ್ರಿಯಾದರೆ ನೀವು ಅಸಮಾಧಾನ ಹೊಂದುವಿರೆ ಎಂದು ಪ್ರಶ್ನಿಸಲು ಪೈಲಟ್"ನಾನೆಂದೂ ಅಸಮಾಧಾನಗೊಳ್ಳಲಾರೆ. ನಾವಿಬ್ಬರೂ ಇದಾಗಲೇ ಪಕ್ಷದಿಂಡ ಸಾಕಷ್ಟು ಪಡೆದಿದ್ದೇವೆ" ಎಂದಿದ್ದಾರೆ.
"ಅವರು (ಗೆಹ್ಲೋಟ್) ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಪಕ್ಷದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ.ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೇನೆ.ಅಲ್ಲದೆ ಮಾಜಿ ಸಚ್ವಿವನಾಗಿದ್ದೇನೆ. ನಾವಿಬ್ಬರೂ ಪಕ್ಷದಿಂದ ಸಾಕಷ್ಟು ಪಡೆಇದ್ದೇವೆ.ಈಗ ಪಕ್ಷದ ಮುಖಂಡರು ನಾವು ಯಾವ ಪಾತ್ರ ವಹಿಸಬೇಕೆಂದು ನಿರ್ಧರಿಸುವ ಸಮಯ"
"ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತ ಪಕ್ಷವು ಸ್ಪಷ್ಟಬಹುಮತ ಪಡೆಯುವುದು ಮುಖ್ಯ.ಏಕೆಂದರೆ ರಾಜಸ್ಥಾನದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ, ಈ ಸಂದೇಶ ದೇಶಾದ್ಯಂತ ಪ್ರಸಾರವಾಗಬೇಕು. - ಜನರು, ರೈತರು, ಯುವಕರು, ಮಹಿಳೆಯರು, ಹಿಂದುಳಿದವರು, ಬುಡಕಟ್ಟು ಜನರು, ಪ್ರತಿಯೊಬ್ಬರೂ - ಈ ರೀತಿಯ ಸೊಕ್ಕಿನ ಸರ್ಕಾರವನ್ನು  ಬಯಸುವುದಿಲ್ಲ." ಪೈಲಟ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.