ಬ್ರಾಹ್ಮಣ ಹೇಳಿಕೆ: ಚುನಾವಣಾ ಆಯೋಗದಿಂದ ಕಾಂಗ್ರೆಸ್ ಮುಖಂಡ ಸಿ. ಪಿ. ಜೋಶಿಗೆ ನೋಟಿಸ್
ರಾಜಸ್ತಾನ ಕಾಂಗ್ರೆಸ್ ಮುಖಂಡ ಡಾ. ಸಿ. ಪಿ. ಜೋಶಿ ಅವರ ಬ್ರಾಹ್ಮಣ ಹೇಳಿಕೆ ಕುರಿತಂತೆ ನಾಳೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.

ನವದೆಹಲಿ: ರಾಜಸ್ತಾನ ಕಾಂಗ್ರೆಸ್ ಮುಖಂಡ ಡಾ. ಸಿ. ಪಿ. ಜೋಶಿ ಅವರ ಬ್ರಾಹ್ಮಣ ಹೇಳಿಕೆ ಕುರಿತಂತೆ ನಾಳೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.
ರಾಜಸ್ತಾನದ ನಾಥದ್ವಾರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನವೆಂಬರ್ 21 ರಂದು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಹಿಂಧೂ ಧರ್ಮದ ಬಗ್ಗೆ ಬ್ರಾಹ್ಮಣರು ಮಾತ್ರ ಮಾತನಾಡಲು ಸಾಧ್ಯ ಎಂದು ಸಿ. ಪಿ. ಜೋಶಿ ಹೇಳಿಕೆ ನೀಡಿದ್ದರು.
ಬ್ರಾಹ್ಮಣರಲ್ಲದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಏಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ . ಕಾಂಗ್ರೆಸ್ ನವರು ಹಿಂದೂ ಅಲ್ಲ ಅಂತಾ ಪ್ರಮಾಣ ಪತ್ರ ನೀಡುವುದಕ್ಕೆ ಅವರಿಗೆ ಅಧಿಕಾರ ನೀಡಿದವರು ಯಾರು ? ಬ್ರಾಹ್ಮಣ ಅಥವಾ ಪಂಡಿತರು ಬಿಟ್ಟರೆ ಬೇರೆ ಯಾರಾದರೂ ಧರ್ಮದ ಬಗ್ಗೆ ಗೊತ್ತೇ ಎಂದು ಪ್ರಶ್ನಿಸಿದರಲ್ಲದೇ, ಪ್ರಧಾನಿ ಮೋದಿ ಹಾಗೂ ಉಮಾಭಾರತಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೋಶಿ ಹೇಳಿಕೆ ನೀಡಿದ್ದರು.
ನಂತರ ಈ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಸಿ. ಪಿ. ಜೋಶಿ ಕ್ಷಮೆ ಯಾಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


