ರಾಜಸ್ತಾನ ವಿಧಾನಸಭೆ ಚುನಾವಣೆ: 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ವಜಾಗೊಳಿಸಿದ ಬಿಜೆಪಿ
ಪಕ್ಷಕ್ಕೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದ ವಸುಂದರಾ ರಾಜೇ ಸಂಪುಟದ 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ರಾಜಸ್ತಾನ ಬಿಜೆಪಿ ವಜಾಗೊಳಿಸಿದೆ...

Published On :
ಜೈಪುರ: ಪಕ್ಷಕ್ಕೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದ ವಸುಂದರಾ ರಾಜೇ ಸಂಪುಟದ 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ರಾಜಸ್ತಾನ ಬಿಜೆಪಿ ವಜಾಗೊಳಿಸಿದೆ,
ಮುಂಬರುವ ರಾಜಸ್ತಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಕೆಲ ಅಭ್ಯರ್ಥಿಗಳನ್ನ ಆಯ್ಕೆ ಮಾಡಿತ್ತು, ಆದರೆ ಅವರಿಗೆ ಅವಕಾಶ ನೀಡದೇ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಹೀಗಾಗಿ 11 ಮಂದಿಯನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ,
ಡಿಸೆಂಬರ್ 7 ರಂದು ರಾಜಸ್ತಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ, ಸುರೇಂದ್ರ ಗೋಯಲ್, ಲಕ್ಷ್ಮಿ ನಾರಾಯಣ್ ದೇವ್, ಸೇರಿದಂತೆ 11 ಮಂದಿಯನ್ನು ವಜಾಗೊಳಿಸಲಾಗಿದೆ. ವಸುಂದರಾ ರಾಜೆ ಅವರಿಗೆ ಬಿಜೆಪಿ ಭಿನ್ನಮತೀಯರು ಭಾರೀ ಪ್ರಮಾಣದಲ್ಲಿ ಮುಜುಗರ ಉಂಟು ಮಾಡಿದ್ದಾರೆ. ಭಿನ್ನಮತೀಯರು ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್ ನಲ್ಲೂ ಕೂಡ ಇದ್ದುಸ ಅಲ್ಲೂ ಕೂಡ ಬಂಡಾಯದ ಭಾವುಟ ಹಾರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿsuspendedಅಮಾನತುVasundhara Rajeವಸುಂದರಾ ರಾಜೆRajasthan Assembly electionರಾಜಸ್ತಾನ ವಿಧಾನಸಭೆ ಚುನಾವಣೆ11 Rebels11 ಬಂಡಾಯಗಾರರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


