ಪರಿಕ್ಕರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು, ಆದರೆ ವರಿಷ್ಠರು ಬಿಡಲಿಲ್ಲ: ಗೋವಾ ಸಚಿವರ ಹೊಸ ಬಾಂಬ್!
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಹದಗೆಟ್ಟ ನಂತರ ಗೋವಾ ಆಡಳಿತ ಪಕ್ಷದಲ್ಲಿನ ಆಗುಹೋಗುಗಳೂ ಹದಗೆಡುತ್ತಿದ್ದು, ಬಿಜೆಪಿ ಮಿತ್ರಪಕ್ಷಗಳೇ ಈಗ ರೆಬೆಲ್ ಆಗಿ, ಪರಿಕ್ಕರ್

Published On :
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಹದಗೆಟ್ಟ ನಂತರ ಗೋವಾ ಆಡಳಿತ ಪಕ್ಷದಲ್ಲಿನ ಆಗುಹೋಗುಗಳೂ ಹದಗೆಡುತ್ತಿದ್ದು, ಬಿಜೆಪಿ ಮಿತ್ರಪಕ್ಷಗಳೇ ಈಗ ರೆಬೆಲ್ ಆಗಿ, ಪರಿಕ್ಕರ್ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ನಡುವೆ ಗೋವಾ ಸಚಿವರು ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಅನಾರೋಗ್ಯಕ್ಕೀಡಾಗುತ್ತಿದ್ದಂತೆಯೇ ಗೋವಾ ಸಿಎಂ ಸ್ಥಾನಕ್ಕೆ ಪರಿಕ್ಕರ್ ರಾಜೀನಾಮೆ ನೀಡಲು ಬಯಸಿದ್ದರು. ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಬೇರೆ ಸಚಿವರಿಗೆ ಹಸ್ತಾಂತರಿಸಲು ಸಿದ್ಧರಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಬಿಡಲಿಲ್ಲ ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಿಡುವುದು ಈಗ ಮನೋಹರ್ ಪರಿಕ್ಕರ್ ಕೈಲಿ ಇಲ್ಲ ಎಂದು ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


