ದೇಶ

ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆಗಳ ಕುರಿತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಿಷ್ಟು

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಮಾತನಾಡಿದ್ದಾರೆ.

ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆಗಳ ಕುರಿತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಿಷ್ಟು
ಪ್ರಣಬ್ ಮುಖರ್ಜಿ
Published On :
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಮಾತನಾಡಿದ್ದಾರೆ.
ಪ್ರಣಬ್ ಮುಖರ್ಜಿ ಫೌಂಡೇಶನ್ ಹಾಗೂ ಸೆಂಟರ್ ಫಾರ್ ರಿಸರ್ಚ್ ಫಾರ್ ರೂರಲ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ (ಸಿಆರ್ ಆರ್ ಐಡಿ) ಸಹಯೋಗದಲ್ಲಿ ನಡೆದ  ಶಾಂತಿ ಹಾಗೂ ಸೌಹಾರ್ದತೆಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಣಬ್ ಮುಖರ್ಜಿ,  ವಸುದೈವ ಕುಟುಂಬಕಂ ಎಂಬ ತತ್ವ ನೀಡಿದ ಭೂಮಿ ಇಂದು ಹೆಚ್ಚುತ್ತಿರುವ ಅಸಹಿಷ್ಣುತೆಗೆ ಸುದ್ದಿಯಾಗುತ್ತಿದೆ. ಬಹುತ್ವವವನ್ನು ಯಾವ ದೇಶದಲ್ಲಿ ಆಚರಿಸಲಾಗುತ್ತದೆಯೇ ಅಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಇರುವ ದೇಶಗಳಲ್ಲಿ ಸಂತೋಷ ಹೆಚ್ಚಿರುತ್ತದೆ. ಆರ್ಥಿಕ ಸ್ಥಿತಿಗತಿಗಳನ್ನೂ ಮೀರಿ, ಜನತೆ ಶಾಂತಿಯಿಂದ ಇದ್ದರೆ ಅಲ್ಲಿ ಸಂತೋಷವೂ ಇರುತ್ತದೆ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಗುರುನಾನಕ್ ಅವರ 549 ನೇ ಜನ್ಮದಿನಾಚರಣೆಯ ಅಂಗವಾಗಿ ಸಿಖ್ ಧರ್ಮ ಗುರುಗಳನ್ನು ಸ್ಮರಿಸಿರುವ ಪ್ರಣಬ್ ಮುಖರ್ಜಿ, ಗುರುನಾನತ್ ಅವರ ಶಾಂತಿ ಹಾಗೂ ಏಕತೆಯ ಸಂದೇಶವನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.  ಸಂತಸ ಹಾಗೂ ಶಾಂತಿಯ ಕುರಿತು ಚಾಣಕ್ಯನ ಮಾತುಗಳನ್ನು ನೆನಪಿಸಿರುವ ಮಾಜಿ ರಾಷ್ಟ್ರಪತಿಗಳು, ಜನರ ಸಂತಸದಲ್ಲೇ ರಾಜನ ಸಂತಸವೂ ಅಡಗಿದೆ, ಋಗ್ವೇದದಲ್ಲಿ ಒಗ್ಗಟ್ಟಿನಿಂದ ಜೀವಿಸಬೇಕು, ಒಂದೇ ಧ್ವನಿಯಾಗಿರಬೇಕೆಂದು ಹೇಳಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.