ಪರಿಕ್ಕರ್ ರಾಜಿನಾಮೆ ನೀಡಲು ಸಿದ್ದ, ಆದರೆ ಬಿಜೆಪಿ ಹೈಕಮಾಂಡ್ ತಡೆಯುತ್ತಿದೆ: ಗೋವಾ ಸಚಿವ
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಬಯಸಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಅಡ್ಡಗಾಲು ಹಾಕಿದೆ ಎಂದು ...

Published On :
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಬಯಸಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಅಡ್ಡಗಾಲು ಹಾಕಿದೆ ಎಂದು ಗೋವಾ ಕೃಷಿ ಸಚಿವ ವಿಜಯ್ ಸರ್ ದೇಸಾಯ್ ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಜೊತೆಗೆ ತಮ್ಮ ಬಳಿಯಿರುವ ಎಲ್ಲಾ ಖಾತೆಗಳನ್ನು ಬಿಟ್ಟುಕೊಡಲು ಮನೋಹರ್ ಪರಿಕ್ಕರ್ ಬಯಸಿದ್ದಾರೆ, ಗಣೇಶ ಚತುರ್ಥಿ ವೇಳೆ ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಸಿದ್ದರಿದ್ದರು ಎಂದು ತಿಳಿಸಿದ್ದಾರೆ.
ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡದಂತೆ ತಡೆಯಿತು ಎಂದು ಹೇಳಿದ್ದಾರೆ, 62 ವರ್ಷದ ಮನೋಹರ್ ಪರಿಕ್ಕರ್ ಆಕ್ಟೋಬರ್ 14 ರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಎಂ ಅನಾರೋಗ್ಯದಿಂದಾಗಿ ಸರ್ಕಾರದ ಆಡಳಿತದ ಮೇಲೆ ಕೆಲವೊಂದು ಪರಿಣಾಮ ಉಂಟಾಗುತ್ತಿದ್ದು, ಎಲ್ಲರಿಗೂ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮನೋಹರ್ ಪರಿಕ್ಕರ್ResignManohar Parrikargoa chief ministerರಾಜೀನಾಮೆಗೋವಾ ಮುಖ್ಯಮಂತ್ರಿBjp high commandಬಿಜೆಪಿ ಹೈಕಮಾಂಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


