ಮಿಜೋರಾಂ ವಿಧಾನಸಭೆ ಕಣದಲ್ಲಿ ಶೇ.4 ರಷ್ಟು ಕ್ರಿಮಿನಲ್ ಅಭ್ಯರ್ಥಿಗಳು: 116 ಕೋಟ್ಯಾಧಿಪತಿಗಳು!
ನವೆಂಬರ್ 28 ರಂದು ಮಿಜೋರಾಂ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, 209 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ..

Published On :
ನವದೆಹಲಿ: ನವೆಂಬರ್ 28 ರಂದು ಮಿಜೋರಾಂ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, 209 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.
ಒಟ್ಟು 209 ಅಭ್ಯರ್ಥಿಗಳ ಪೈಕಿ ಕೇವಲ ಶೇ.4 ಮಂದಿಯ ವಿರುದ್ದ ಮಾತ್ರವೇ ಕ್ರಿಮಿನಲ್ ಕೇಸುಗಳಿವೆ; ಜೊತೆಗೆ 116 ಮಂದಿ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.
ಒಟ್ಟು 9 ಅಭ್ಯರ್ಥಿಗಳ ಪೈಕಿ ಕೇವಲ ನಾಲ್ಕು ಮಂದಿ (ಶೇ.2) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಕೇಸುಗಳಿವೆ ಎಂದು ಘೋಷಿಸಿಕೋಂಡಿದ್ದಾರೆ.
ಕ್ರಿಮಿನಲ್ ಕೇಸುಗಳಿರುವ ಅಭ್ಯರ್ಥಿಗಳ ಪಕ್ಷವಾರು ಹಂಚಿಕೆಯ ಪ್ರಕಾರ ಬಿಜೆಪಿಯ ಇಬ್ಬರು, ಕಾಂಗ್ರೆಸ್ ಮತ್ತು ಮಿಜೋ ನ್ಯಾಶನಲ್ ಫ್ರಂಟ್‌ನ ತಲಾ ಮೂವರು, ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಕ್ರಿಮಿನಲ್ ಕೇಸು ಹೊಂದಿದವರಾಗಿದ್ದಾರೆ ಎಂದು ಪ್ರಜಾಸತ್ತೆ ಸುಧಾರಣಾ ಸಂಘ (ಎಡಿಆರ್)ದ ಪತ್ರಿಕಾ ಪ್ರಕಟಣೆ ತಿಳಿಸಿದೆ.
2013ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮಿಜೋರಾಂ ವಿಧಾನ ಸಭಾ ಚುನಾವಣಾ ಕಣದಲ್ಲಿ ಕ್ರಿಮಿನಲ್ ಕೇಸು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಕೇವಲ ಶೇ.2 ಇದ್ದದ್ದು ಈ ಬಾರಿ ಶೇ.4ಕ್ಕೇರಿದೆ. ಹಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ನೋಡಿದಾಗ ಇದು ಅತ್ಯಂಕ ಕನಿಷ್ಠ ವಾಗಿದೆ.
ಮಿಜೋರಾಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿಪಾಸ್ತಿ 3.11 ಕೋಟಿ ರೂ. ಇದೆ. 2013ರಲ್ಲಿ 2.31 ಕೋಟಿ ರೂ. ಸರಾಸರಿ ಇತ್ತು.
ಮಿಜೋರಾಂ ನ 40 ವಿಧಾನಸಭೆ ಕ್ಷೇತ್ರಗಳಿಗೆ 209 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
criminal casesಕ್ರಿಮಿನಲ್ ಕೇಸ್ಕೋಟ್ಯಾಧಿಪತಿಗಳುCandidatesಅಭ್ಯರ್ಥಿಗಳುCrorepatiMizoram pollsಮಿಜೋರಾಂ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


