ಮುಸ್ಲಿಂಮರ ಶೇ.90 ರಷ್ಟು ಮತಗಳಿಗಾಗಿ ಬೇಡಿಕೆ ಇಡುತ್ತಿರುವ ಕಮಲ್ ನಾಥ್ ವಿಡಿಯೋ ವೈರಲ್!
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಿದೆ.

Published On :
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುತ್ತಿದೆ. ಪ್ರಾರಂಭದಲ್ಲಿ ಆರ್ ಎಸ್ಎಸ್ ಕುರಿತ ಹೇಳಿಕೆಯಿಂದ ಪಕ್ಷ ಮುಜುಗರ ಎದುರಿಸಿದ್ದರೆ, ನಂತರದ ದಿನಗಳಲ್ಲಿ ಕಮಲ್ ನಾಥ್ ಅವರ ಮಹಿಳೆಯರ ಕುರಿತಾದ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಈಗ ಕಮಲ್ ನಾಥ್ ಮತ್ತೊಮ್ಮೆ ಇದೇ ರೀತಿಯ ಕಾರಣವೊಂದಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ.
ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಶೇ.90 ರಷ್ಟು ಮತಗಳು ಕಾಂಗ್ರೆಸ್ ಗೇ ಬರುವಂತೆ ನೋಡಿಕೊಳ್ಳುವುದಕ್ಕೆ ಮುಸ್ಲಿಂ ಮುಖಂಡರಲ್ಲಿ ಕಮಲ್ ನಾಥ್ ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಸಮುದಾಯದ ಓಲೈಕೆಯ ಬಗ್ಗೆಯಷ್ಟೇ ಗಮನ ಹರಿಸುತ್ತಿದೆ ಎಂದು ಆರೋಪಿಸಿದೆ.
ಇದೇ ವೇಳೆ ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೋಮು ಆಧಾರದಲ್ಲಿ ಮತದಾರರನ್ನು ಒಡೆಯುವುದಕ್ಕೆ ಬಿಜೆಪಿ ಮಾಡುತ್ತಿರುವ ಆರೋಪ ಇದಾಗಿದೆ ಎಂದು ಹೇಳಿದೆ. ಬಿಜೆಪಿಯ ಮತಯಾಚನೆ ಕುರಿತಾಗಿ ಮಾತನಾಡುತ್ತಿದ್ದ ಕಮಲ್ ನಾಥ್, ಬಿಜೆಪಿ ಒಂದೇ ಒಂದು ಸಂದೇಶ ಹೊಂದಿದೆ, ನರೇಂದ್ರ ಮೋದಿಗೆ ಹಾಕುವ ಪ್ರತಿ ಮತವೂ, ಹಿಂದೂಗಳಿಗೆ ಮತ ಹಾಕಿದಂತೆ, ಮುಸ್ಲಿಮರಿಗೆ ಮತ ನೀಡಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ ಎಂಬ ಸಂದೇಶ ರವಾನೆ ಮಾಡುತ್ತಿದೆ. ಈ ವಿಷಯವನ್ನು ನಂತರ ನೋಡಿಕೊಳ್ಳೋಣ, ಆದರೆ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಶೇ.90 ರಷ್ಟು ಮತದಾನವಾಗುವಂತೆ ನೋಡಿಕೊಳ್ಳಿ ಎಂದು ಮುಸ್ಲಿಂ ಮುಖಂಡರಲ್ಲಿ ಕಮಲ್ ನಾಥ್ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


