ಅಮಿತಾಬ್ ಮತ್ತು ದೀಪಿಕಾ ಅತ್ಯಂತ ಪ್ರಭಾವಶಾಲಿ ಭಾರತೀಯರು: ಅದ್ಯಯನ
ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ. ಬಚ್ಚನ್ ಹಾಗೂ ದೀಪಿಕಾ ಬಾಲಿವುಡ್ ಮತ್ತು ಕ್ರೀಡಾ...

Published On :
ಮುಂಬೈ: ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ. ಬಚ್ಚನ್ ಹಾಗೂ ದೀಪಿಕಾ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಭಾರತದಲ್ಲೇ ಅತ್ಯಂತ ಪ್ರಭಾವಶಾಲಿಗಳೆಂಡು ಅದ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಸುಮಾರು 60 ಟಾಪ್ ಬಾಲಿವುಡ್ ಪ್ರಸಿದ್ಧ ವ್ಯಕ್ತಿಗಳು ಮತ್ತು ಕ್ರೀಡಾ ಕ್ಷೇತ್ರದ ವ್ಯಕ್ತಿಗಳ ಬಗೆಗೆ ಜನರ ಗ್ರಹಿಕೆಗಳನ್ನು ಒಳಗೊಂಡು ಯುವೌ ಇನ್ಫ್ಲುಎನ್ಸರ್ ಇಂಡೆಕ್ಸ್ 2018 ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.ತಿಂಗಳೋಂದರಲ್ಲಿ 1,948 ಭಾರತೀಯರು ಸೇರಿದಂತೆ ವಿಶ್ವದಾದ್ಯಂತ 6 ಮಿಲಿಯನ್ ಜನರು ಈ ಅದ್ಯಯನದಲ್ಲಿ ತೊಡಗಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ / ವೈಯಕ್ತಿಕ ಆರೈಕೆ, ತಂತ್ರಜ್ಞಾನ / ವಾಹನ, ಫ್ಯಾಷನ್, ಉಡುಗೆ-ತೊಡುಗೆ ಆಹಾರ, ಪಾನೀಯ ಮತ್ತು ಪ್ರಯಾಣ ಹಾಗೂ ಹಣಕಾಸು ಸೇರಿ ಹಲವು ವಿಭಾಗಗಳಲ್ಲಿ ಜನರ ಗ್ರಹಿಕೆಯ ಮಟ್ಟವನ್ನು ಈ ಅದ್ಯಯನದಲ್ಲಿ ಅಳೆಯಲಾಗಿದೆ. "ಒಟ್ಟಾರೆ ಸೂಚ್ಯಾಂಕವು ಸಮಾನತೆ, ವಿಶ್ವಾಸಾರ್ಹತೆ ಮತ್ತು ವೈಯಕ್ತಿಕ ವಲಯದ ಪ್ರಭಾವದ ಅಂಶವನ್ನು ಒಳಗೊಂಡಿದೆ.
ಪಟ್ಟಿಯಲ್ಲಿ ಬಚ್ಚನ್ ಮೊದಲ ಸ್ಥಾನದಲ್ಲಿದ್ದರೆ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಮತ್ತು ಸಚಿನ್ ತೆಂಡುಲ್ಕರ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ ಅಕ್ಷಯ್ ಕುಮಾರ್ ಐದನೆಯ, ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಅನುಕ್ರಮವಾಗಿ ಏಳನೇ ಮತ್ತು ಎಂಟನೆಯ ಸ್ಥಾನಗಳನ್ನು ಪಡೆದಿದ್ದರೆ ಅಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿದ್ದಾರೆ.
ಒಲಂಪಿಕ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಭಾರತದ 15 ಮಂದಿ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬ್ಬರಾಗಿ ಸ್ಥಾನಗಿತ್ಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹೇಂದ್ರ ಸಿಂಗ್ ಧೋನಿMahendra Singh DhoniAmitabh BachchanDeepika Padukoneದೀಪಿಕಾ ಪಡುಕೋಣೆಅಮಿತಾಭ್ ಬಚ್ಚನ್most influential Indiansಪ್ರಭಾವಿ ಭಾರತೀಯರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


