ದೇಶ

ರಾಷ್ಟ್ರರಾಜಧಾನಿಯಲ್ಲಿ ಅವಳಿ ಕೊಲೆ: ಫ್ಯಾಶನ್ ಡಿಸೈನರ್ ಮತ್ತು ಕೆಲಸದಾಕೆ ಭೀಕರ ಹತ್ಯೆ!

ರಾಷ್ಟ್ರ ರಾಜಧಾವನಿ ದೆಹಲಿಯ ವಸಂತ್ ಕುಂಜ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಅವಳಿಕೊಲೆ ಬೆಚ್ಚಿಬೀಳಿಸಿದೆ. ಐವತ್ತು ವರ್ಷ ವಯಸ್ಸಿನ ಮಾಲಾ ಲಖನಿ ಮತ್ತು ಆಕೆಯ ...

ರಾಷ್ಟ್ರರಾಜಧಾನಿಯಲ್ಲಿ ಅವಳಿ ಕೊಲೆ: ಫ್ಯಾಶನ್ ಡಿಸೈನರ್ ಮತ್ತು ಕೆಲಸದಾಕೆ ಭೀಕರ ಹತ್ಯೆ!
ಮಾಲಾ ಲಖನಿ
Published On :
ದೆಹಲಿ: ರಾಷ್ಟ್ರ ರಾಜಧಾವನಿ ದೆಹಲಿಯ ವಸಂತ್ ಕುಂಜ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಅವಳಿಕೊಲೆ ಬೆಚ್ಚಿಬೀಳಿಸಿದೆ. ಐವತ್ತು ವರ್ಷ ವಯಸ್ಸಿನ ಮಾಲಾ ಲಖನಿ ಮತ್ತು ಆಕೆಯ ಮನೆಕೆಲಸದಾಕೆಯನ್ನು ದುಷ್ಕರ್ಮಿಗಳು ಕೊಂದಿದ್ದಾರೆ. 
ಬೆಳಿಗ್ಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಮಾಲಾ ಲಖನಿ ಮನೆಯಿಂದ ಜೋರಾಗಿ ಗಲಾಟೆಗಳು ಕೇಳಿಸಿವೆ. ಇದರಿಂದ ಆತಂಕಗೊಂಡ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. 
ವಸಂತ್ ಎನ್ ಕ್ಲೇವ್ ಅಪಾರ್ಟ್ ಮೆಂಟಿನ ಎ ಬ್ಲಾಕ್ ನಲ್ಲಿದ್ದ ಮಾಲಾ ಲಖನಿ ಮನೆಗೆ ಪೊಲೀಸರು ಆಗಮಿಸುವ ಹೊತ್ತಿಗೆ ಅವಳಿ ಕೊಲೆ ನಡೆದಿದೆ
ಮಾಲಾ ಅವರ ಮೃತದೇಹ ಅವರ ಬೆಡ್ ರೂಂ ನಲ್ಲಿ ಪತ್ತೆಯಾದರೆ, ಕೆಲಸದಾಕೆಯ ಮೃತದೇಹ ಹಾಲ್ ನಲ್ಲಿ ಪತ್ತೆಯಾಗಿದೆ.
ದರೋಡೆಗೆ ಬಂದಿದ್ದವರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.