ದೇಶ

2ನೇ ತ್ರೈಮಾಸಿಕ ಅವಧಿಯಲ್ಲಿ ಶೇ, 69 ರಷ್ಟು ಕುಸಿತದೊಂದಿಗೆ 576 ಕೋಟಿ ರೂ ನಿವ್ವಳ ಲಾಭ ಗಳಿಸಿದ ಎಸ್ ಬಿಐ

ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ, 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

2ನೇ ತ್ರೈಮಾಸಿಕ ಅವಧಿಯಲ್ಲಿ ಶೇ, 69 ರಷ್ಟು ಕುಸಿತದೊಂದಿಗೆ 576 ಕೋಟಿ ರೂ ನಿವ್ವಳ ಲಾಭ ಗಳಿಸಿದ ಎಸ್ ಬಿಐ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ,  69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಒಟ್ಟಾರೇ,  1, 840. 43 ಕೋಟಿ ರೂ ಲಾಭ ಗಳಿಸಿತ್ತು. ವಸೂಲಾಗದ ಸಾಲದಿಂದಾಗಿ ಮೊದಲ ಆರ್ಥಿಕ ವರ್ಷದಲ್ಲಿ ಎಸ್ ಬಿಐಗೆ 4,875.85 ಕೋಟಿ ರೂ.ನಷ್ಟ  ಉಂಟಾಗಿತ್ತು.

ವರ್ಷದ ಹಿಂದೆ ಇದ್ದ 74, 948.51 ಕೋಟಿ ರೂ. ಆದಾಯಕ್ಕೆ  ಹೋಲಿಸಿದರೆ  ಈ ಅವಧಿಯಲ್ಲಿ ಒಟ್ಟಾರೇ, 79, 302.72 ಕೋಟಿ ರೂ. ಲಾಭ ಬಂದಿದೆ ಎಂದು ಎಸ್ ಬಿಐ ಹೇಳಿದೆ.  ಶೇ .4.84 ರಷ್ಟಿದ್ದ ವಸೂಲಾಗದ ಸಾಲದ ಪ್ರಮಾಣ ಶೇ. 4.53 ರಷ್ಟಿದೆ.

ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 16, 842.18 ಕೋಟಿ ರೂ. ವಸೂಲಾಗದ ಸಾಲದ ಮೇಲಿನ ವಿನಾಯಿತಿ ಈ ಅವಧಿಯಲ್ಲಿ  10. 381.31 ಕೋಟಿ ಆಗಿದೆ. ಬ್ಯಾಂಕ್ ನಿವ್ವಳ ಲಾಭ 1. 581. 55 ಕೋಟಿ ಯಿಂದ 944.87ಕ್ಕೆ ಕುಸಿತ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.