ವೋಟ್ ಸಿಗುತ್ತೆ ಅಂದ್ರೆ ಬಿನ್ ಲಾಡೆನ್ ಜಯಂತಿಯನ್ನೂ ಮಾಡ್ತಾರೆ: ಸಿಟಿ ರವಿ
ಮತ್ತೆ ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿದ್ದು, ಬಿಜೆಪಿ ಶಾಸಕ ಸಿಟಿ ರವಿ ಸರ್ಕಾರದ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Published On :
ಚಿಕ್ಕಮಗಳೂರು: ಮತ್ತೆ ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿದ್ದು, ಬಿಜೆಪಿ ಶಾಸಕ ಸಿಟಿ ರವಿ ಸರ್ಕಾರದ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಜಯಂತಿಯನ್ನು ಮಾಡುತ್ತೇವೆ ಎಂದು ಸರ್ಕಾರ ಸಷ್ಟಪಡಿಸಿದ ಬೆನ್ನಲ್ಲೇ ಶಾಸಕ ಸಿಟಿ ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, 'ಟಿಪ್ಪು ಜಯಂತಿಯನ್ನು ಯಾಕೆ ಮಾಡುತ್ತಾರೆ? ಟಿಪ್ಪು ಇವರ ಅಪ್ಪಾನಾ, ತಾತನಾ, ಮುತ್ತಾತನಾ? ಎಂದು ಹೇಳುವ ಮೂಲಕ ಟಿಪ್ಪು ಜಯಂತಿ ಆಚರಣೆ ಕುರಿತು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
'ಟಿಪ್ಪು ಕನ್ನಡಕ್ಕೆ ಕೊಡುಗೆ ಕೊಟ್ಟವನಾ? ಆಕ್ರಮಣಕಾರಿಯ ಜಯಂತಿ ಆಚರಿಸುವುದಾದರು ಏಕೆ? ಇವರನ್ನ ಹೀಗೆ ಬಿಟ್ಟರೆ ಬಾಬರ್ ಜಯಂತಿ, ಘಜ್ನಿ ಮೊಹಮ್ಮದ್ ಜಯಂತಿ, ಉಗ್ರ ಒಸಮಾ ಬಿನ್ ಲಾಡೆನ್ ಜಯಂತಿನೂ ಮಾಡುತ್ತಾರೆ. ಅಲ್ಲದೆ ವೋಟ್ ಜಾಸ್ತಿಯಾಗುತ್ತೆ ಎಂದು ಬಿನ್ ಲಾಡೆನ್ ಜಯಂತಿ ಮಾಡಿದರೂ ಅಚ್ಚರಿಯೇನಿಲ್ಲ. ಆದರೆ ಜನ ಸುಮ್ಮನೆ ಬಿಡುತ್ತಾರಾ ಎಂದು ಟಿಪ್ಪು ಜಯಂತಿಗೆ ಮುಂದಾದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruPoliticsರಾಜಕೀಯKarnataka GovernmentCT Raviಕರ್ನಾಟಕ ಸರ್ಕಾರಸಿಟಿ ರವಿಟಿಪ್ಪು ಜಯಂತಿTippu Jayanti Row
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


