ದೇಶ

ಮೋದಿ ಅನಾಕೊಂಡ ಇದ್ದಂತೆ, ಸಿಬಿಐ, ಆರ್ ಬಿಐ ಅನ್ನು ನುಂಗಿ ಹಾಕುತ್ತಿದ್ದಾರೆ: ಆಂಧ್ರ ಸಚಿವ

ಪ್ರಧಾನಿ ಮೋದಿ ಅನಾಕೋಂಡ ಹಾವಿದ್ದಂತೆ.. ತಮಗೆ ಸಿಕ್ಕ ಎಲ್ಲವನ್ನೂ ನುಂಗಿ ಹಾಕುತ್ತಿದ್ದು, ಇದೀಗ ಅವರ ಹಸಿವಿಗೆ ಸಿಬಿಐ ಮತ್ತು ಆರ್ ಬಿಐ ಸಂಸ್ಥೆಗಳು ಆಹಾರವಾಗಿದೆ ಎಂದು ಆಂಧ್ರ ಪ್ರದೇಶ ಸಚಿವರೊಬ್ಬರು ಹೇಳಿದ್ದಾರೆ.

ಮೋದಿ ಅನಾಕೊಂಡ ಇದ್ದಂತೆ, ಸಿಬಿಐ, ಆರ್ ಬಿಐ ಅನ್ನು ನುಂಗಿ ಹಾಕುತ್ತಿದ್ದಾರೆ: ಆಂಧ್ರ ಸಚಿವ
ಸಂಗ್ರಹ ಚಿತ್ರ
Published On :
ಹೈದರಾಬಾದ್: ಪ್ರಧಾನಿ ಮೋದಿ ಅನಾಕೋಂಡ ಹಾವಿದ್ದಂತೆ.. ತಮಗೆ ಸಿಕ್ಕ ಎಲ್ಲವನ್ನೂ ನುಂಗಿ ಹಾಕುತ್ತಿದ್ದು, ಇದೀಗ ಅವರ ಹಸಿವಿಗೆ ಸಿಬಿಐ ಮತ್ತು ಆರ್ ಬಿಐ ಸಂಸ್ಥೆಗಳು ಆಹಾರವಾಗಿದೆ ಎಂದು ಆಂಧ್ರ ಪ್ರದೇಶ ಸಚಿವರೊಬ್ಬರು ಹೇಳಿದ್ದಾರೆ.
ಆಂಧ್ರ ಪ್ರದೇಶ ವಿತ್ತ ಸಚಿವ ಯನಮಾಲ ರಾಮಕೃಷ್ಣುಡು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಅನಾಕೊಂಡ ಹಾವಿಗಿಂತ ದೊಡ್ಡದಾದದ್ದು ಏನಾದರೂ ಇದ್ದರೆ ಅದು ಪ್ರಧಾನಿ ಮೋದಿ ಮಾತ್ರ. ಪ್ರಧಾನಿ ಮೋದಿ ತಮ್ಮ ಹಸಿವಿಗೆ ದೇಶದ ಎಲ್ಲ ಪ್ರಮುಖ ಸಂಸ್ಥೆಗಳೂ ಆಹಾರವಾಗಿದ್ದು, ಇದೀಗ ಸಿಬಿಐ ಮತ್ತು ಆರ್ ಬಿಐ ಅನ್ನೂ ಕೂಡ ನುಂಗಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನ ಲಕ್ಷ್ಮಿನಾರಾಯಣ ಅವರು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಭ್ರಷ್ಟಾಚಾರದ ರಾಜನಾಗಿದ್ದು, ಅವರ ಭ್ರಷ್ಟಾಚಾರದ ಹಗರಣಗಳು ಶೀಘ್ರ ಬಯಲಾಗಲಿದೆ  ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.