ದೆಹಲಿ ಸಿಗ್ನೇಚರ್ ಸೇತುವೆ ಉದ್ಘಾಟನೆ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿಯಿಂದ ಪೋಲೀಸರ ಮೇಲೆ ಹಲ್ಲೆ!
ನವದೆಹಲಿಯ ಸಿಗ್ನೇಚರ್ ಸೇತುವೆ ಉದ್ಘಾಟನೆ ವಿಚಾರದಲ್ಲಿ ದೆಹಲಿಯ ಬಿಜೆಪಿ ಮುಖ್ಯ ಮನೋಜ್ ತಿವಾರಿ ಬೆಂಬಲಿಗರು ಹಾಗೂ ಆಮ್ ಆದ್ಮಿ ಪಕ್ಷದ ಬೆಂಬಲಿಗರ ನಡುವಿನ ಮಾತಿನ ಚಕಮಕಿ....

Published On :
ನವದೆಹಲಿ ನವದೆಹಲಿಯ ಸಿಗ್ನೇಚರ್ ಸೇತುವೆ ಉದ್ಘಾಟನೆ ವಿಚಾರದಲ್ಲಿ ದೆಹಲಿಯ ಬಿಜೆಪಿ ಮುಖ್ಯ ಮನೋಜ್ ತಿವಾರಿ ಬೆಂಬಲಿಗರು ಹಾಗೂ ಆಮ್ ಆದ್ಮಿ ಪಕ್ಷದ ಬೆಂಬಲಿಗರ ನಡುವಿನ ಮಾತಿನ ಚಕಮಕಿ ಹಿಂಸಾತ್ಮಕ ಸ್ವರೂಪ ಪಡೆದಿದೆ.
ಮೂಲಗಳ ಪ್ರಕಾರ ತಿವಾರಿ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಪೋಲೀಸರು ಹಾಗೂ ಆಮ್ ಆದ್ಮಿಒ ಪಕ್ಷದ ಕಾರ್ಯಕರ್ತರು ಆಗಮಿಸದಂತೆ ತಡೆಯೊಡ್ಡಿದ್ದರು. ಆದರೆ ಮನೋಜ್ ತಿವಾರಿ ಹೇಳುವತೆ ಎಎಪಿ ಕಾರ್ಯಕರ್ತರು ಅವರೊಡನೆ ಅನುಚಿತವಾಗಿ ವರ್ತಿಸಿದ್ದಾರೆ.
"ನಾನು ಈ ಕಾರ್ಯಕ್ರಮಕ್ಕೆ ಆಹ್ವಾನಿತನಾಗಿದ್ದೇನೆ. ನಾನು ಸ್ಥಳೀಯ ಸಂಸದನಾಗಿದ್ದೇನೆ, ನಾನೇನೂ ಅಪರಾಧಿಯೆ? ಪೋಲೀಸರಏಕೆ ನನ್ನನ್ನು ಸುತ್ತುವರಿದಿದ್ದಾರೆ? ನಾನು ಕೇಜ್ರಿವಾಲ್ ಅವರನ್ನು ಸ್ವಾಗತಿಸಲು ಇಲ್ಲಿದ್ದೇನೆ. ಆದರೆ ಎಎಪಿ ಕಾರ್ಯಕರ್ತರು ಮತ್ತು ಪೊಲೀಸರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ" ಅವರು ಹೇಳಿದರು.
ಆದರೆ ತಿವಾರಿ ಹೇಳಿಕೆಗೆ ತಿರುಗೇಟು ನೀಡಿರುವ ಎಎಪಿ, ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ ಎಂದಿದೆ.
"ಆಮಂತ್ರಣ ಪತ್ರಿಕೆ ಇಲ್ಲದೆ ಸಾವಿರಾರು ಜನರು ಉದ್ಘಾಟನಾಕಾರ್ಯಕ್ರಮಕ್ಕೆ ಇಲ್ಲಿ ಸೇರಿದ್ದಾರೆ. ಆದರೆ ಸಂಸತ್ ಸದಸ್ಯರು ಸ್ವತಃತಮ್ಮನ್ನು ತಾವು ವಿಐಪಿ ಎಂದು ಪರಿಗಣಿಸಿದ್ದಾರೆ.ಅವರು ಮತ್ತು ಅವರ ಅನುಯಾಯಿಗಳು ಗೂಂಡಾಗಿರಿ ನಡೆಸಿದ್ದು ಬಿಜೆಪಿ ಸಂಸದ ಹಾಗೂ ಬೆಂಬಲಿಗರು ನಮ್ಮ ಕಾರ್ಯಕರ್ತರು, ಸಾರ್ವಜನಿಕರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.""ಎಎಪಿ ನಾಯಕ ದಿಲೀಪ್ ಪಾಂಡೆ ಹೇಳಿದರು.
ಈಶಾನ್ಯ ದೆಹಲಿಯ ಸಂಸದನಾದ ಬಳಿಕ ತಾನು ಈ ಸೇತುವೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಎಂದು ಸಂಸದ ತಿವಾರಿ ಹೇಳಿದ್ದಾರೆ."ನನ್ನ ಕ್ಷೇತ್ರದಲ್ಲಿ ಹಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆಯನಿರ್ಮಾಣ ಕಾರ್ಯವನ್ನು ನಾನು ಪುನಾರಂಭಿಸಿದ್ದೇನೆ.ಹಾಗೆಯೇ ಈಗ ಅರವಿಂದ ಕೇಜ್ರಿವಾಲ್ ಇದನ್ನು ಉದ್ಘಾಟಿಸಲಿದ್ದಾರೆ."ತಿವಾರಿ ಹೇಳಿದ್ದಾರೆ.
ಯಮುನಾದಲ್ಲಿನ ಸಿಗ್ನೇಚರ್ ಸೇತುವೆಯು ಉತ್ತರ ಮತ್ತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಿ ಪ್ರಯಾಣಿಕರ ಅನುಕೂಲಕ್ಕೆ ಸಹಾಯವಾಗಲಿದೆ.154 ಮೀಟರ್ ಎತ್ತರದ ಗಾಜಿನ ಪೆಟ್ಟಿಗೆಯಾಕಾರದಲ್ಲಿನ ಇದು ಒಂದು ಪ್ರವಾಸಿ ಆಕರ್ಷಣೆಯೂ ಹೌದು.ಸೇತುವೆ ಮೇಲಿನಿಂದ ನಗರದ ವಿಶಾಲ ನೋಟವನ್ನು ಸವಿಯುವುದು ಸಾಧ್ಯವಿದೆ.2004ರಲ್ಲಿ ಈ ಸೇತುವೆ ನಿರ್ಮಾಣ ಯೋಜನೆ ಪ್ರಸ್ತಾಪವಾಗಿತ್ತು. 2011ರಿಂದ ಇಂದಿನವರೆಗೆ ಇದು ಅನೇಕ ಬಾರಿ ನಿರ್ಮಾಣ ಹಂತದ ಅಡೆತಡೆಗಳನ್ನು ಎದುರಿಸಿ ಅಂತಿಮವಾಗಿ ಇಂದು ಉದ್ಘಾಟನೆಗೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AAPಎಎಪಿManoj Tiwariಮನೋಜ್ ತಿವಾರಿSignature bridge inaugurationDelhi Signature bridgeಸಿಗ್ನೇಚರ್ ಸೇತುವೆ ಉದ್ಘಾಟನೆದೆಹಲಿ ಸಿಗ್ನೇಚರ್ ಸೇತುವೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


