ಎನ್ಆರ್ ಸಿ ಪಟ್ಟಿ ಸೇರಲು, ಆಕ್ಷೇಪಣೆ ಸಲ್ಲಿಸಲು ಡಿ.15 ಗಡುವು ನೀಡಿದ ಸುಪ್ರೀಂ ಕೋರ್ಟ್
ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯಲ್ಲಿ ಹೆಸರು ಸೇರಿಸಲು ಮತ್ತು ಆಕ್ಷೇಪಣೆಗಳನ್ನು...

Published On :
ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯಲ್ಲಿ ಹೆಸರು ಸೇರಿಸಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ, ಎನ್ ಆರ್ ಸಿ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತೆ ಐದು ದಾಖಲೆಗಳಿಗೆ ಅನುಮತಿ ನೀಡಿದೆ. ಮುಂಚೆ ಈ ಐದು ದಾಖಲೆಗಳಿಗೆ ಎನ್ ಆರ್ ಸಿ ವಿರೋಧ ವ್ಯಕ್ತಪಡಿಸಿತ್ತು.
ಹೊಸದಾಗಿ ಅನುಮತಿ ನೀಡಿದ ಐದು ದಾಖಲೆಗಳು:
1951ರ ಎನ್ ಆರ್ ಸಿ
1966 ರ ಮತದಾರರ ಪಟ್ಟಿ
1971ರ ಮತದಾರರ ಪಟ್ಟಿ
1971ರ ವರೆಗಿನ ನಿರಾಶ್ರಿತರ ನೋಂದಣಿ ಪ್ರಮಾಣಪತ್ರ
1971ರೊಳಗೆ ನೀಡಿದ ರೇಷನ್ ಕಾರ್ಡ್
ಇದೇ ವೇಳೆ ಫೆಬ್ರವರಿ 1ರೊಳಗೆ ದಾಖಲೆಗಳ ಪರಿಶೀಲನೆ ಮುಗಿಸುವಂತೆ ಎನ್ ಆರ್ ಸಿಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


