ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ಪೈಸೆ ಕಡಿತ ಅರ್ಥಹೀನ: ವೀರಪ್ಪ ಮೊಯ್ಲಿ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೇವಲ 1 ಪೈಸೆ ಕಡಿತ ಮಾಡಿರುವುವುದು ಅರ್ಥಹೀನವಾಗಿದ್ದು, ಕೇಂದ್ರ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು ಗುರುವಾರ ಹೇಳಿದ್ದಾರೆ...

Published On :
ನವದೆಹಲಿ; ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೇವಲ 1 ಪೈಸೆ ಕಡಿತ ಮಾಡಿರುವುವುದು ಅರ್ಥಹೀನವಾಗಿದ್ದು, ಕೇಂದ್ರ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪೆಟ್ರೋಲ್ ದರದ ಮೇಲೆ ಕೇವಲ 1 ಪೈಸೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಜನರನ್ನು ಕೇಂದ್ರ ಅಪಹಾಸ್ಯ ಮಾಡುತ್ತಿದೆ. ಜನರ ಮೇಲೆ ಭಾರೀ ಅಬಕಾರಿ ಸುಂಕವನ್ನು ಹೇರುತ್ತಿದೆ. ನಮ್ಮ ಸರ್ಕಾರ ಈ ರೀತಿಯ ಎಂದಿಗೂ ನಡೆದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ವರ್ತನೆ ತ್ರಾಸದಾಯಕವಾಗಿದ್ದು, ಜನರಿಗೆ ಭಾರೀ ಸಮಸ್ಯೆಯುಂಟಾಗುತ್ತಿದೆ. ಇಡೀ ಏಷಿಯಾದಲ್ಲಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕಡಿಮೆಯಾಗುತ್ತಿರುವಾಗ ಭಾರತದಲ್ಲಿ ಮಾತ್ರ ಬೆಲೆ ಏರುತ್ತಲೇ ಇದೆ. ವ್ಯವಹಾರ ನಡೆಸುವ ಕ್ರೂರ ಮಾರ್ಗ ಇದಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


