ಇದೇ ಮೊದಲು, ಪತ್ನಿಯರನ್ನು ಪರಿತ್ಯಜಿಸಿದ್ದ 5 ಎನ್‌ಆರ್‌ಐಗಳ ಪಾಸ್‌ಪೋರ್ಟ್ ಹಿಂಪಡೆದ ಕೇಂದ್ರ!
ಭಾರತದಲ್ಲಿ ತಮ್ಮ ಪತ್ನಿಯರನ್ನು ಪರಿತ್ಯಜಿಸಿರುವ ಆನಿವಾಸಿ ಭಾರತೀಯರಿಗೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ಇದೀಗ ಮೊದಲ ಬಾರಿಗೆ ಐವರು...

Published On :
ನವದೆಹಲಿ: ಭಾರತದಲ್ಲಿ ತಮ್ಮ ಪತ್ನಿಯರನ್ನು ಪರಿತ್ಯಜಿಸಿರುವ ಆನಿವಾಸಿ ಭಾರತೀಯರಿಗೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ ಇದೀಗ ಮೊದಲ ಬಾರಿಗೆ ಐವರು ಎನ್‌ಆರ್‌ಐಗಳ ಪಾಸ್ ಪೋರ್ಟ್ ಅನ್ನು ಹಿಂಪಡೆದಿದೆ.
ಎನ್‌ಆರ್‌ಐಗಳ ವೈವಾಹಿಕ ವಿವಾದ ಪ್ರಕರಣಗಳ ಇತ್ಯರ್ಥ ಸಂಬಂಧ ಕೇಂದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ವಿದೇಶಾಂಗ ಸಚಿವಾಲಯವು ಮೊದಲ ಬಾರಿಗೆ ಈ ಕ್ರಮವನ್ನು ಕೈಗೊಂಡಿದೆ.
ಭಾರತದಲ್ಲಿ ಪತ್ನಿಯರನ್ನು ಪರಿತ್ಯಜಿಸಿದ ಎನ್‌ಆರ್‌ಐಗಳಿಗೆ ಇದಕ್ಕೂ ಮುನ್ನ ಪತ್ರಿಕೆಗಳಲ್ಲಿ ನೋಟಿಸ್ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಮೂಲಕ ನೇರವಾಗಿ ಎನ್‌ಆರ್‌ಐಗೆ ಸಮನ್ಸ್ ಕಳುಹಿಸಲು ಎಂಇಎ ಒಪ್ಪಿಕೊಂಡಿದೆ.
ಭಾರತೀಯ ವಧುಗಳನ್ನು ಮದುವೆಯಾಗಿ ಕೆಲ ದಿನಗಳಲ್ಲೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪತ್ನಿಯನ್ನು ಪರಿತ್ಯಜಿಸುತ್ತಿದ್ದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳಿಗೆ ಬ್ರೇಕ್ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈ ದಿಟ್ಟ ಕ್ರಮಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


