ಪಿಡಬ್ಲ್ಯೂಡಿ ಅಕ್ರಮ: ದೆಹಲಿ ಸಚಿವರ ಮನೆ ಮೇಲೆ ಸಿಬಿಐ ದಾಳಿ
ದೆಹಲಿ ಸರ್ಕಾರದ ಸಚಿವರಾದ ಸತ್ಯೇಂದರ್ ಜೈನ್ ವಿರುದ್ದ ಕೇಂದ್ರೀಯ ತನಿಖಾ ದಳ(ಸಿಬಿಐಅ) ಪ್ರಕರಣ ದಾಖಲಿಸಿಕೊಂಡಿದೆ,

Published On :
ನವದೆಹಲಿ: ದೆಹಲಿ ಸರ್ಕಾರದ ಪಿಡಬ್ಲ್ಯೂಡಿ ಸಚಿವರಾದ ಸತ್ಯೇಂದರ್ ಜೈನ್ ವಿರುದ್ದ ಕೇಂದ್ರೀಯ ತನಿಖಾ ದಳ(ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ, ಬುಧವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಜೈನ್ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪಿಡಬ್ಲ್ಯೂಡಿ ನೇಮಕಾತಿ ಅಕ್ರಮ ಸಂಬಂಧ ಈ ದಾಳಿ ನಡೆದಿದೆ. 2017ರಲ್ಲಿ ಒಟ್ಟು 24 ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಅವರುಗಳಿಗೆ ಯಾವ ರೀತಿಯ ಅನುಭವವಿಲ್ಲ, ಆದರೆ ದೇಶದ ಅತ್ಯುತ್ತಮ ಆರ್ಕಿಟೆಕ್ಟ್ ಕಾಲೇಜುಗಳಲ್ಲಿ ಕಲಿತು ಬಂದವರೆಂದು ಹೇಳಿ ಹುದ್ದೆಗೆ ಇವರನ್ನು ಅಕ್ರಮವಾಗಿ ನೇಮಕ ಮಾಡಿಕೊಲ್ಳಲಾಗಿದೆ ಎಂದು ಸಿಬಿಐ ಆರೋಪಿಸಿದೆ
ಈ ಕುರಿತಂರೆ ಪ್ರತಿಕ್ರಯಿಸಿರುವ ಸಚಿವ ಜೈನ್ ಪಿಡಬ್ಲ್ಯೂಡಿ ನಿಂದ ಸೃಜನಶೀಲ ತಂಡವನ್ನು ನೇಮಕ ಮಾಡಿದ್ದ ಸಂಬಂಧ ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. .ವಿವಿಧ ಯೋಜನೆಗಳಿಗೆ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಸಿಬಿಐ ಇದೀಗ ಅವರೆಲ್ಲರನ್ನೂ ಬಲವಂತದಿಂದ ಹೊರಹಾಕಿದೆ ಎಂದಿದ್ದಾರೆ.
ಸಾರ್ವಜನಿಕ ಕಾಮಗಾರಿ ಇಲಾಖೆಯ ವಿವಿಧ ಯೋಜನೆಗಳಿಗೆ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುವಲ್ಲಿ ಅಕ್ರಮ ನಡೆದ ಆರೋಪದ ಮೇಲೆ ಸಿಬಿಐಅ ದೆಹಲಿ ರಾಜ್ಯ ಪಿಡಬ್ಲ್ಯೂಡಿ ಸಚಿವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಎರಡು ವರ್ಷಗಳ ಅವಧಿಕಾಗಿ 24 ವೃತ್ತಿಪರರ ನೇಮಕವನ್ನು ಮಾಡಿಕೊಳ್ಳಲಾಗಿದ್ದು ಇದಕ್ಕೆ 5.74 ಕೋಟಿ ರೂ. ವ್ಯಯವಾಗಿದೆ.
ಈ ಸಂಬಂಧ ಪ್ರತಿಕ್ರಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ "ಮೋದಿ ಏನನ್ನು ಬಯಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


