ಹಿಂದೂಗಳ ರಕ್ಷಣೆಗಾಗಿ ಭಜರಂಗದಳಕ್ಕೆ ಶಸಾಸ್ತ್ರ ತರಬೇತಿ
ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಬಾವಾರದಲ್ಲಿ ಇದೇ ತಿಂಗಳು ಹಿಂದೂಗಳ ರಕ್ಷಣೆ ಹೆಸರಿನಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿ, ಭಜರಂಗದಳದ ಕಾರ್ಯಕರ್ತರಿಗೆ ಶಸಾಸ್ತ್ರ ಮತ್ತಿತರ ಅಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.

ರಾಜ್ ಘರ್: ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಬಾವಾರದಲ್ಲಿ ಇದೇ ತಿಂಗಳು ಹಿಂದೂಗಳ ರಕ್ಷಣೆ ಹೆಸರಿನಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿ, ಭಜರಂಗದಳದ ಕಾರ್ಯಕರ್ತರಿಗೆ ಶಸಾಸ್ತ್ರ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
ಮೇ 3 ರಿಂದ 11ರವರೆಗೆ ನಡೆದ ಶಿಬಿರದಲ್ಲಿ ರಾಷ್ಟ್ರ ವಿರೋಧಿ ಲವ್ ಜಿಹಾದಿ ನಿಬಾಯಿಸಲು ಆಯ್ದ 32 ಜಿಲ್ಲೆಗಳ ಸದಸ್ಯರಿಗೆ ಬಂದೂಕು, ಲಾಠಿ, ಕತ್ತಿ, ಮತ್ತಿರ ಆಯುಧ ಬಳಕೆ ಕುರಿತಂತೆ ತರಬೇತಿ ನೀಡಲಾಗಿದೆ. ವಿಶೇಷವಾಗಿ ಶೂಟಿಂಗ್, ಕರಾಟೆ, ಮರ ಹತ್ತುವುದು, ಹೈ ಜಂಪಿಂಗ್ ಮತ್ತಿತರ ತರಬೇತಿ ನೀಡಲಾಗಿದೆ.
ಒಂದು ಬಾರಿ ಶಿಬಿರಕ್ಕೆ ಹಾಜರಾದರೆ ಮತ್ತೆ ಎಲ್ಲೂ ಹೊರಗಡೆ ಹೋಗುವ ಅವಕಾಶ ಇರುವುದಿಲ್ಲ , ಬೆಳಿಗ್ಗೆ 4 ರಿಂದಲೂ ರಾತ್ರಿ 11 ಗಂಟೆಯವರೆಗೂ ಅಲ್ಲಿಯೇ ಇರಬೇಕಾಗುತ್ತದೆ , ಎಲ್ಲಾ ಸೌಕರ್ಯವನ್ನು ಅಲ್ಲಿಯೇ ನೀಡಲಾಗುತ್ತದೆ.
ರಾಷ್ಟ್ರ ವಿರೋಧಿ ಲವ್ ಜಿಹಾದಿ ನಿಬಾಯಿಸಲು ಈ ರೀತಿಯ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗುತ್ತದೆ ಎಂದು ಭಜರಂಗ ದಳ ಜಿಲ್ಲಾ ಸಂಘಟಕ ದೇವಿ ಸಿಂಗ್ ಸೊಂದಿಯಾ ಹೇಳಿದ್ದಾರೆ. ಈ ಮಧ್ಯೆ ಯಾರೊಬ್ಬರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಬಿಜೆಪಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


