ದೇಶ

ಮೇಜರ್ ಲೀಟುಲ್ ಗೊಗೋಯ್ ನನಗೆ ಫೇಸ್‌ಬುಕ್‌ ಫ್ರೆಂಡ್: ಯುವತಿ ಸ್ಪಷ್ಟನೆ

ಮೇಜರ್ ನಿತಿನ್ ಲೀಟುಲ್ ಗೊಗೊಯ್ ನನಗೆ ಫೇಸ್‌ಬುಕ್‌ ಫ್ರೆಂಡ್ ಅಷ್ಟೆ ಎಂದು ಯುವತಿ ಸ್ಪಷ್ಟನೆ ನೀಡಿದ್ದಾಳೆ...

ಮೇಜರ್ ಲೀಟುಲ್ ಗೊಗೋಯ್ ನನಗೆ ಫೇಸ್‌ಬುಕ್‌ ಫ್ರೆಂಡ್: ಯುವತಿ ಸ್ಪಷ್ಟನೆ
ನಿತಿನ್ ಲೀತುಲ್ ಗೊಗೊಯಿ
Published On :
ಶ್ರೀನಗರ: ಮೇಜರ್ ನಿತಿನ್ ಲೀಟುಲ್ ಗೊಗೊಯ್ ನನಗೆ ಫೇಸ್‌ಬುಕ್‌ ಫ್ರೆಂಡ್ ಅಷ್ಟೆ ಎಂದು ಯುವತಿ ಸ್ಪಷ್ಟನೆ ನೀಡಿದ್ದಾಳೆ. 
ಗೊಗೊಯ್ ಯುವತಿ ಜತೆಗೆ ಹೋಟೆಲ್ ಪ್ರವೇಶಿಸಿದ್ದ ಪ್ರಕರಣಕ್ಕೆ ಹೊಸ ಟ್ವೀಟ್ ಸಿಕ್ಕಿದೆ. ಕಾಶ್ಮೀರಿ ಯುವತಿ, ನಾನು ಗೊಗೊಯ್ ಅವರ ಫೇಸ್‌ಬುಕ್‌ ಫ್ರೆಂಡ್. ಹೀಗಾಗಿ ನನ್ನ ಇಚ್ಛೆಯ ಮೇರೆಗೆ ನಾನು ಅವರನ್ನು ಭೇಟಿ ಮಾಡಲು ಹೋಗಿದ್ದೆ ಎಂದು ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಾಳೆ. 
ಗೊಗೊಯ್ ಅವರು ಕಳೆದ ವರ್ಷವಷ್ಟೇ ಕಲ್ಲು ಎಸೆಯುವವರನ್ನು ತಡೆಯಲು ಜೀಪ್ ಗೆ ಕಾಶ್ಮೀರಿ ವ್ಯಕ್ತಿಯೊಬ್ಬರನ್ನು ಕಟ್ಟಿಹಾಕಿ ಮಾನವ ರಕ್ಷಣೆಯ ರೀತಿ ಬಳಸಿಕೊಂಡ ವಿವಾದದಲ್ಲಿ ಸಿಲುಕಿದ್ದರು. ಇದೀಗ ಯುವತಿಯೊಬ್ಬಳನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದಕ್ಕೆ ಅಲ್ಲಿನ ಸಿಬ್ಬಂದಿಯೊಬ್ಬರು ತಗಾದೆ ತೆಗೆದಿದ್ದರು. 
ಮ್ಯಾಜಿಸ್ಟ್ರೇಟ್ ಮುಂದೆ ತಾನು ಬುದ್ಗಾಮ್ ಜಿಲ್ಲೆಯ ಚೆಕ್-ಇ-ಕವೂಸಾ ಗ್ರಾಮದವಳು ಹಾಗೂ ತಾನು ಅಪ್ರಾಪ್ತೆಯಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ದಾಖಲೆಯಾಗಿ ತನ್ನ ಆಧಾರ್ ಕಾರ್ಡ್ ಅನ್ನು ಕೋರ್ಟ್ ನಲ್ಲಿ ತೋರಿಸಿದ್ದಾಳೆ. ಇದರಲ್ಲಿ 1999ರಲ್ಲಿ ಯುವತಿ ಜನಿಸಿದ್ದಾಳೆ ಎಂದು ಇತ್ತು ಎಂದು ಮೂಲಗಳು ತಿಳಿಸಿವೆ. ಆದಿಲ್ ಅದ್ನಾನ್ ಎಂಬ ಹೆಸರಿನ ಫೇಸ್ ಬುಕ್ ಅಕೌಂಟ್ ಜತೆಗೆ ಸಂಪರ್ಕಕ್ಕೆ ಬಂದಿದ್ದೆ. ಬಳಿಕ ಮೇಜರ್ ಗೊಗೊಯ್ ಸ್ವತಃ ಇದು ತಾನೇ ಎಂದು ಹೇಳಿಕೊಂಡಿದ್ದರು. ಬಳಿಕ ನಾವಿಬ್ಬರೂ ಗೆಳೆಯರಾಗಿದ್ದೆವು. ಇನ್ನ ಸಮೀರ್ ಅಹ್ಮದ್ ಗೊಗೊಯ್ ಸಹಚರ ಅವರು ನನಗೆ ಪರಿಚಯ ಎಂದು ಯುವತಿ ಹೇಳಿದ್ದಾಳೆ.
ಈ ಪ್ರಕರಣವನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಡಿಎಸ್ ಪಿ ದರ್ಜೆಯ ಅಧಿಕಾರಿ ಹಾಗೂ ಪೊಲೀಸ್ ಸೂಪರಿಟೆಂಡೆಂಟ್ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.