ದೇಶ

ತಿರುಚ್ಚಿ ದೇಗುಲದ ಮದವೇರಿದ ಆನೆಯಿಂದ ಮಾವುತನ ಮೇಲೆ ದಾಳಿ, ಸಾವು!

ತಮಿಳುನಾಡು ರಾಜ್ಯದ ತಿರುಚಿಯಲ್ಲಿರುವ ಸಮಯಪುರಂ ದೇಗುಲದಲ್ಲಿ ಮದವೇರಿದ ಆನೆಯೊಂದು ದಾಳಿ ನಡೆಸಿದ್ದು, ಆನೆ ದಾಳಿಗೆ ಮಾವುತ ಸಾವನ್ನಪ್ಪಿ ಇಬ್ಬರು ಭಕ್ತಾದಿಗಳಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ...

ತಿರುಚ್ಚಿ ದೇಗುಲದ ಮದವೇರಿದ ಆನೆಯಿಂದ ಮಾವುತನ ಮೇಲೆ ದಾಳಿ, ಸಾವು!
ತಿರುಚ್ಚಿ ದೇಗುಲದ ಮದವೇರಿದ ಆನೆಯಿಂದ ಮಾವುತನ ಮೇಲೆ ದಾಳಿ, ಸಾವು!
Published On :
ತಿರುಚಿ: ತಮಿಳುನಾಡು ರಾಜ್ಯದ ತಿರುಚಿಯಲ್ಲಿರುವ ಸಮಯಪುರಂ ದೇಗುಲದಲ್ಲಿ ಮದವೇರಿದ ಆನೆಯೊಂದು ದಾಳಿ ನಡೆಸಿದ್ದು, ಆನೆ ದಾಳಿಗೆ ಮಾವುತ ಸಾವನ್ನಪ್ಪಿ ಇಬ್ಬರು ಭಕ್ತಾದಿಗಳಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ. 
9 ವರ್ಷದ ದೇಗುಲದ ಆನೆ ಗಜೇಂದ್ರ 50 ವರ್ಷದ ಮಸಿನಿ ಎಂಬ ಮಾವುತ ಮೇಲೆ ದಾಳಿ ಮಾಡಿದ್ದು, ದಾಳಿಗೆ ಮಾವುತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆನೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ದೇಗುಲದಲ್ಲಿದ್ದ ಇಬ್ಬರು ಭಕ್ತಾದಿಗಳು ಓಡಿ ಹೋಗಲು ಯತ್ನ ನಡೆಸಿದಾಗ ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. 
ಆನೆ ದೇಗುಲ ಒಳಗೇ ಇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. 
ಮದವೇರಿದ ಆನೆಯನ್ನು ಹಿಡಿದು ಪಳಗಿಸಲು ಪ್ರಸ್ತುತ ದೇಗುಲದ ಅಧಿಕಾರಿಗಳು ಯತ್ನ ನಡೆಸುತ್ತಿದ್ದು, ಮಾವುತನ ಮೃತದೇಹವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.