ದೇಶ

ಹಣದ ಚೀಲ ಹೊಂದಿದವರಿಗೆ ಬಿಜೆಪಿಗೆ ಪ್ರವೇಶ: ಶಿವಸೇನೆ ನಾಯಕ ಉದ್ಭವ್ ಠಾಕ್ರೆ

ಮಿತ್ರ ಪಕ್ಷವಾದ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಶಿವಸೇನೆ ವರಿಷ್ಠ ಉದ್ಭವ್ ಠಾಕ್ರೆ ಗುರುವಾರ ಸಹ ತಮ್ಮ ಟೀಕೆಗಳನ್ನು ಮುಂದುವರಿಸಿದ್ದಾರೆ.

ಹಣದ ಚೀಲ ಹೊಂದಿದವರಿಗೆ ಬಿಜೆಪಿಗೆ ಪ್ರವೇಶ: ಶಿವಸೇನೆ ನಾಯಕ ಉದ್ಭವ್ ಠಾಕ್ರೆ
ಉದ್ಧವ್ ಠಾಕ್ರೆ
Published On :
ಮುಂಬೈ: ಮಿತ್ರ ಪಕ್ಷವಾದ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಶಿವಸೇನೆ ವರಿಷ್ಠ ಉದ್ಭವ್ ಠಾಕ್ರೆ ಗುರುವಾರ ಸಹ ತಮ್ಮ ಟೀಕೆಗಳನ್ನು ಮುಂದುವರಿಸಿದ್ದಾರೆ. ಬಿಜೆಪಿಯಲ್ಲಿ ಯಾವ ಆದರ್ಶಗಳು ಉಳಿದಿಲ್ಲ. ಅವರಿಗೆ ಕೇವಲ ಹಣವಷ್ಟೇ ಪ್ರಮುಖವಾಗಿದೆ. ಹಣವಿದ್ದವರು ಯಾರೇ ಆದರೂ ಬಿಜೆಪಿಗೆ ಸೇರಬಹುದು ಎಂದರು.
ಮೇ 28ರಂದು ನಡೆಯುವ ಪಾಲ್ಗಾರ್ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸಿರುವ ಶಿವಸೇನೆಯ ಶ್ರೀನಿವಾಸ ವಾನಗ ಅವರ ಪರವಾಗಿ ಮತಯಾಚನೆಮಾಡುವ ವೇಳೆ ಠಾಕ್ರೆ ಮಾತನಾಡಿದರು.
"ಯಾರಲ್ಲಿ ಹಣ, ಅಧಿಕಾರವಿದೆಯೋ ಅವರು ಬಿಜೆಪಿಗೆ ಸೇರ್ಪಡೆಯಾಗಬಹುದು.ಎಂದ ಠಾಕ್ರೆ ಶಿವಸೇನೆಯ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕರು ಎಂದಿದ್ದಾರೆ.
ಚಿಂತಾಮನ್ ವಾನಗ ಅವರೊಡನೆ ಕೇಸರಿ ದ್ವಜದಡಿಯಲ್ಲಿ ನೀವು ಕಾರ್ಯ ನಿರ್ವಹಿಸಿದ್ದೀರಿ. ಆದರೆ ಅವರಿಂದು ಕೇಸರಿ ಪಕ್ಷವಾಗಿ ಉಳಿದಿಲ್ಲ. ಯಾರೇ ಹಣದ ಚೀಲ ತೋರಿಸಿದರೆ ಪಕ್ಷಕ್ಕೆ ಪ್ರವೇಶ ದೊರಕಲಿದೆ. ಆದರೆ ನಾವು ಯಾರನ್ನೂ ಹಣ ಪಡೆದು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಉದ್ಭವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಪಾಲ್ಗಾರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಚಿಂತಾಮನ್ ವಾನಗ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು ವಾನಗ ಪುತ್ರ ಶ್ರೀನಿವಾಸ ವಾನಗ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.