ದೇಶ

ಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕ ಸೆಂಗಾರ್ ಮೂರು ದಿನ ಸಿಬಿಐ ವಶಕ್ಕೆ

ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಮೂರು ದಿನಗಳ ಕಾಲ ಸಿಬಿಐಅ ವಶಕ್ಕೆ ಪಡೆಯಲಾಗಿದೆ.

ಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕ ಸೆಂಗಾರ್  ಮೂರು ದಿನ ಸಿಬಿಐ ವಶಕ್ಕೆ
ರಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕ ಸೆಂಗಾರ್ ಮೂರು ದಿನ ಸಿಬಿಐ ವಶಕ್ಕೆ
Published On :
ಲಖನೌ(ಉತ್ತರ ಪ್ರದೇಶ): ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕ  ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಮೂರು ದಿನಗಳ ಕಾಲ ಸಿಬಿಐಅ ವಶಕ್ಕೆ ಪಡೆಯಲಾಗಿದೆ.
ಅತ್ಯಾಚಾರ ಸಂಸ್ತ್ರಸ್ತೆಯ ತಂದೆ ಪೋಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಕುರಿತಂತೆ ಸಹ ಶಾಸಕನನ್ನು ತನಿಖೆಗೆ ಒಳಪಡಿಸಲಾಗುತ್ತದೆ.
2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆಂದು ಬಾಲಕಿ ಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಎಫ್‍ಐಆರ್ ನಲ್ಲಿ ದಾಖಲಿಸಲಾಗಿದೆ.
ಅಲ್ಲದೆ ಇದೇ ವರ್ಷ ಏಪ್ರಿಲ್ ನಲ್ಲಿ ಸಂಸ್ತ್ರಸ್ತೆ ಪರ ಅವರ ತಂದೆ ದೂರು ಸಲ್ಲಿಸಿದ್ದರು. ಆಗ ಪೋಲೀಸರು ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದರು. ಏ.3 ರಂದುಅವರ ಬಂಧನವಾಗಿದ್ದು ಏ.5 ರಂದು ಅವರು ಪೋಲೀಸ್ ವಶದಲ್ಲಿರುವಂತೆಯೇ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರ ದೇಹದಲ್ಲಿ ಗಂಭೀರವಾದ ಗಾಯಗಳಿರುವುದು ಪತ್ತೆಯಾಗಿತ್ತು..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.